Site icon PowerTV

ರಸ್ತೆ ದುರಸ್ತಿ ಮಾಡದ ಸರ್ಕಾರ; ಮೂರು ಪಕ್ಷದ ಕಾರ್ಯಕರ್ತರಿಂದ ಸಾಮೂಹಿಕ ರಾಜೀನಾಮೆ

ಚಿಕ್ಕಮಗಳೂರು: ಮುಂಬರುವ 2023 ವಿಧಾನಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕಾರ ಮಾಡಲು ಮೂರು ಪಕ್ಷದ ಕಾರ್ಯಕರ್ತರು ನಿರ್ಧಾರಿಸಿದ ಘಟನೆ ಕೊಪ್ಪ ತಾಲೂಕಿನ ಜಯಪುರದ ಹಾಡುಗಾರ ಗ್ರಾಮದಲ್ಲಿ ಕೇಳಿ ಬಂದಿದೆ.

ಕೊಪ್ಪ ತಾಲೂಕಿನ ಜಯಪುರ ಸಮೀಪದ ರಸ್ತೆ ದುರಸ್ತಿಯನ್ನ ಸರ್ಕಾರ ಮಾಡದ ಹಿನ್ನಲೆಯಲ್ಲಿ ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಕಾರ್ಯಕರ್ತರು ಸಾಮೂಹಿಕ ರಾಜೀನಾಮೆಗೆ ಮುಂದಾಗಿ, ಜನ ಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ರಸ್ತೆ ಸಂಪೂರ್ಣ ಕುಸಿಯುವ ಹಂತ ತಲುಪಿದ್ದು, ದಿನ ನಿತ್ಯ ಸುಮಾರು 450ಕ್ಕೂ ಅಧಿಕ ಜನ ಓಡಾಡುವ ರಸ್ತೆ‌ ಇದಾಗಿದೆ. ಅದೆಷ್ಟೋ ಬಾರಿ ಮನವಿ ಮಾಡಿದರು ರಸ್ತೆ ಸರಿಪಡಿಸದ ಕಾರಣಕ್ಕೆ ಮತದಾನ ಬಹಿಷ್ಕಾರ ಮಾಡುವ ಎಚ್ಚರಿಕೆಯನ್ನ ಗ್ರಾಮಸ್ಥರು ನೀಡಿದರು.

Exit mobile version