Site icon PowerTV

ಮೊದಲು ಅಪರೇಷನ್ ಕಮಲ, ಈಗ ರೌಡಿಗಳ ಅಪರೇಷನ್; ಡಿಕೆ ಶಿವಕುಮಾರ್​

ಬೆಂಗಳೂರು: ಕುಖ್ಯಾತ ರೌಡಿ ಸೈಲೆಂಟ್ ಸುನೀಲ್ ಸೇರಿದಂತೆ ಇತರ ರೌಡಿ ಶೀಟರ್ ಬಿಜೆಪಿ ಸೇರ್ಪಡೆ ವಿಚಾರವಾಗಿ ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಈ ಮೊದಲು ರಾಜ್ಯದಲ್ಲಿ ಬಿಜೆಪಿ ನಾಯಕರುಗಳು ಅಪರೇಷನ್ ಕಮಲ ಮಾಡಿದ್ರು, ಈಗ ರೌಡಿಗಳ ಆಪರೇಷನ್ ಮಾಡ್ತಿದ್ದಾರೆ. ಅವರಿಗೆ ಒಳ್ಳೆಯದಾಗಲಿ, ಶುಭವಾಗಲಿ ಎಂದರು.

ದೇಶ, ರಾಜ್ಯದಲ್ಲಿ ನಮ್ಮ ಪಕ್ಷವೇ ಇಲ್ಲ. ಡಬಲ್ ಇಂಜಿನ್ ಸರ್ಕಾರವಿದೆ. ಏನೋ ಹೆಣ ಗಿಣ ಹೊರೋಕೆ ನಾವು ನಾಲ್ಕು ಜನ ಇದ್ದೇವೆ. ಬಿಜೆಪಿಗೆ ಅಭ್ಯರ್ಥಿಗಳು ಇದ್ದಾರೋ ಇಲ್ವೋ ಎಂಬುದನ್ನ ಅವರನ್ನೇ ಕೇಳಿ ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ವಿಚಾರವಾಗಿ ಮಾತನಾಡಿ, ಮೂರ್ನಾಲ್ಕು ದಿನಗಳಲ್ಲಿ ಚುನಾವಣೆ ಸಮಿತಿ ರಚನೆ ಆಗುತ್ತದೆ. ದೆಹಲಿ ಇಂದ ಸಮಿತಿ ಸದಸ್ಯರ ಪಟ್ಟಿ ಬಿಡುಗಡೆ ಆಗುತ್ತದೆ ಎಂದು ಡಿಕೆಶಿ ತಿಳಿಸಿದರು.

Exit mobile version