Site icon PowerTV

ಫೇಸ್​​ಬುಕ್​​ನಲ್ಲಿ​​ ಅಂದದ ಫೋಟೋ ಹಾಕಿ ಯುವಕನಿಗೆ ಖೆಡ್ಡಾ ತೊಡಿದ ಆಂಟಿ.!

ಹಾಸನ: ಫೇಸ್ ಬುಕ್ ಮೂಲಕ ಸ್ನೇಹಿತೆಯಾಗಿ ಆಗಿ ಯುವಕ ಲಕ್ಷ-ಲಕ್ಷ ರೂ ವಂಚಿಸಿದ ಘಟನೆ ವಿಜಯಪುರದಲ್ಲಿ ಬೆಳಕಿಗೆ ಬಂದಿದೆ.

ಮಂಜುಳಾ ಎಂಬಾತೆ ಫೇಸ್ ಬುಕ್ ಮೂಲಕ ಪ್ರೆಂಡ್ ಆಗಿ ಯುವಕನನ್ನ ವಂಚಿಸಿದ್ದ ಹಾಸನದ ಬೆಡಗಿ ಆಗಿದ್ದಾಳೆ. ಇಡೀ ವಂಚನೆಯ ಹಿಂದೆ ಪೇಸ್ ಬುಕ್ ಗೆಳತಿಯ ಗಂಡನ ಕೈವಾಡವಾಗಿದ್ದು, ಪತಿ ಸ್ವಾಮಿ ಹಾಗೂ ತಾನು ಸೇರಿಯೆ ಈ ಯುವಕನ ಬೆತ್ತಲೆ ಪೋಟೋ ಇಟ್ಟುಕೊಂಡು ವಂಚನೆ ಮಾಡಿದ್ದಾರೆ.

ಇನ್ನು, ಗಂಡ ಹೆಂಡತಿ‌ ಸೇರಿಯೆ ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ಪರಮೇಶ್ವರ್ ಹಿಪ್ಪರಗಿ ಎಂಬಾತನಿಗೆ ವಂಚನೆ ಮಾಡಿದ್ದು, ಬೆತ್ತಲೆ ಸ್ನಾನ ಮಾಡುವಂತೆ ಒತ್ತಾಯಿಸಿದ್ದಾಳೆ, ಬಳಿಕ ಹಣಕ್ಕಾಗಿ ಡಿಮ್ಯಾಂಡ್ ಇಟ್ಟ ಪೇಸ್ ಬುಕ್ ಗೆಳತಿ. ವಿಚಾರಣೆ ವೇಳೆ ಗಂಡ ಈ ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ಮಹಿಳೆ ಬಾಯ್ಬಿಟ್ಟಿದ್ದಾಳೆ.

ತಾನು ಐಎಎಸ್ ಮಾಡ್ತಿರೋದಾಗಿ ಹೇಳಿ ಪರಮೇಶ್ವರ ಗೆಳೆತನ ಮಾಡಿದ್ದ ಹಾಸನದ ಮಂಜುಳಾ, ವಂಚಿಸಿ 40 ಲಕ್ಷ ಹಣ ತನ್ನ ಪೆಡರಲ್ ಬ್ಯಾಂಕ್ ಅಕೌಂಟ್ ಗೆ ಹಾಕಿಸಿಕೊಂಡಿದ್ದಳು. ಆ ಹಣದಲ್ಲಿ 100 ಗ್ರಾಂ ಬಂಗಾರ, ಹುಂಡೈ ಕಾರ್, ಬೈಕ್ ಖರೀದಿ ಮಾಡಿದ್ದಳು, ಜೊತೆಗೆ ಊರಲ್ಲಿ ಮನೆ ನಿರ್ಮಾಣ ಮಾಡುತ್ತಿದ್ದಳು. ಮಂಜುಳಾ ಬಂಧನದ ಬಳಿಕ ಅಸಲಿ ಪ್ರಕರಣ ಬಯಲಿಗೆ ಬಂದಿದೆ.

Exit mobile version