Site icon PowerTV

ನಾಗನೊಂದಿಗೆ ನಾನು ಚರ್ಚಿಸಿಲ್ಲ-ವಿ. ಸೋಮಣ್ಣ

ಬೆಂಗಳೂರು : ರೌಡಿಶೀಟರ್ ನಾಗ ಸಚಿವ ವಿ. ಸೋಮಣ್ಣ ಮನೆಗೆ ಭೇಟಿ ನೀಡಿ ಮಾತನಾಡಿರುವ ವಿಚಾರಕ್ಕೆ ಸಚಿವ ವಿ. ಸೋಮಣ್ಣ ಸ್ಪಷ್ಟನೆ ನೀಡಿದ್ದಾರೆ.

ರೌಡಿಶೀಟರ್ ನಾಗನಿಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ. ನನ್ನ ಮನೆಗೆ ಸಾವಿರಾರು ಜನ ಬರ್ತಾರೆ, ಹೋಗ್ತಾರೆ. ನಾನು ಶಾಸಕನಾಗಿ 40 ವರ್ಷ ಆಯ್ತು. ನನಗೆ ನಾಗ, ತಿಮ್ಮ ಯಾರು ಅಂತ ಗೊತ್ತಿಲ್ಲ ಎಂದು ಹೇಳಿದ್ರು. ನಾನು ಆತನೊಂದಿಗೆ ಒಂದು ಗಂಟೆಯಲ್ಲ. ಒಂದು ಕ್ಷಣವೂ ಕೂಡ ಚರ್ಚೆ ನಡೆಸಿಲ್ಲ ಎಂದು ತಿಳಿಸಿದ್ರು.

ಇನ್ನು,ಈ ರೀತಿ ಇಲ್ಲ ಸಲ್ಲದ್ದನ್ನು ನನ್ನ ತಲೆಗೆ ಕಟ್ಟಬೇಡಿ. ನನ್ನ ಮನೆಗೆ ಯಾರು ಬಂದಿದ್ದಾರೆ, ಯಾರು ಹೋಗಿದ್ದಾರೆ ಅನ್ನೋದು ಗೊತ್ತಿಲ್ಲ. ನನಗೆ ಈ ವಿಚಾರದಿಂದ ಮಾನಸಿಕವಾಗಿ ಸಾಕಷ್ಟು ನೋವಾಗಿದೆ. ಆ ತರಹದ ರಾಜಕೀಯ, ವ್ಯವಹಾರ ಮಾಡಿ ನನಗೆ ಗೊತ್ತಿಲ್ಲ ಎಂದು ತಿಳಿಸಿದ್ರು.

Exit mobile version