Site icon PowerTV

ಸಪ್ತಪದಿ ತುಳಿಯೋಕೆ ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ರೆಡಿ

ಚಂದನವನದಲ್ಲಿ ತಾರೆಯರ ಸಾಲು ಸಾಲು ಶುಭಕಾರ್ಯಗಳು ನಡೆಯುತ್ತಲೇ ಇದೆ. ಇದೀಗ ಸಪ್ತಪದಿ ತುಳಿಯೋಕೆ ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ರೆಡಿಯಾಗಿದ್ದಾರೆ.

ಮೊನ್ನೆಯಷ್ಟೇ ಯಶಸ್ವಿ ಜೊತೆ ನಟಿ ಅದಿತಿ ಪ್ರಭುದೇವ ಕಲ್ಯಾಣವಾಯ್ತು, ಏರ್’ಪೋರ್ಟ್’ನಲ್ಲಿ ಕೈ ಕೈ ಹಿಡಿದು ಮದ್ವೆ ಹಿಂಟ್ ನೀಡಿದ್ದ ಹರಿಪ್ರಿಯಾ- ವಸಿಷ್ಠ ಸಿಂಹ, ಇದೀಗ ಸಪ್ತಪದಿ ತುಳಿಯೋಕೆ ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ರೆಡಿಯಾಗಿದ್ದಾರೆ. ಫ್ಯಾಷನ್ ಡಿಸೈನರ್ ಅವಿವಾ ಬಿದ್ದಪ್ಪ ಕೈ ಹಿಡಿಯಲಿರೋ ಅಂಬಿ ತನಯ ನಿನ್ನೆಯಷ್ಟೇ ಸುಮಲತಾ ಅಂಬರೀಶ್ ಮನೆಯಲ್ಲಿ ಕುಟುಂಬಸ್ಥರು ವೀಳ್ಯ ಶಾಸ್ತ್ರ ಮುಗಿಸಿದ್ದಾರೆ.

ಇನ್ನು, ಅಂಬಿ- ಸುಮಲತಾ ವಿವಾಹ ವಾರ್ಷಿಕೋತ್ಸವ ದಿನವಾದ ಡಿಸೆಂಬರ್ 8ಕ್ಕೆ ಅಭಿ ಕಲ್ಯಾಣದ ಅಧಿಕೃತ ಮಾಹಿತಿ ದೊರೆತಿದೆ. ಈಗಾಗ್ಲೇ ಕದ್ದು ಮುಚ್ಚಿ ಡೇಟ್ ಮಾಡ್ತಿದ್ದ ಯಂಗ್ ರೆಬೆಲ್ ಸ್ಟಾರ್ & ಅವಿವಾ, ಅವಿವಾ ಬಿದ್ದಪ್ಪ ಕೊರಳಲ್ಲಿ ಅಭಿಷೇಕ್ ಹೆಸರಿನ ಪೆಂಡೆಂಟ್ ಧರಿಸಿದ್ದಾರೆ.

Exit mobile version