Site icon PowerTV

ಪ್ರತ್ಯೇಕ ಮುಸ್ಲಿಂ ಕಾಲೇಜು ನಿರ್ಧಾರ ಖಂಡನೀಯ : ಪ್ರಮೋದ್ ಮುತಾಲಿಕ್

ಧಾರವಾಡ : ಕರ್ನಾಟಕದ BJP ಸರ್ಕಾರ 10 ಮುಸ್ಲಿಂ ಕಾಲೇಜ್ ಆರಂಭ ಮಾಡಲು ನಿರ್ಧಾರ ಮಾಡಿದ್ದನ್ನು ಖಂಡಿಸುತ್ತೆನೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಹಿಜಾಬ್ ಸಮಾನತೆ ಹಾಗೂ ಏಕತೆ ಎಂದು ಹೇಳಿದಾಗ ಹೈಕೋರ್ಟ್ ಅದರ ಬಗ್ಗೆ ಮನ್ನಣೆ ಕೊಟ್ಟಿದೆ. ಸರ್ಕಾರ ವಕ್ಫ್​​​​ ಬೋರ್ಡ್ ಮೂಲಕ ಮುಸ್ಲಿಂ ಕಾಲೇಜ್ ನಿರ್ಮಿಸಿಲು 25 ಕೋಟಿ ತೆಗೆದಿಡುವದು ಮುರ್ಖತನ ಎಂದು ಅವರು ಕಿಡಿಕಾಡಿದ್ದಾರೆ.

ಈ ರೀತಿ‌ ಪ್ರತ್ಯೇಕತೆಯಿಂದಲೇ ಪಾಕಿಸ್ತಾನ ನಿರ್ಮಾಣ ಆಗಿದ್ದು , ಧರ್ಮದ ಆಧಾರದ ಮೇಲೆ ಅದು ನಿರ್ಮಾಣ ಆಗಿದೆ
ಅದು ಬೇಡ ಅಂತಾನೇ ಇವತ್ತು ನಮ್ಮ ಹೋರಾಟ ಎಂದು ಅವರು ತಿಳಿಸಿದರು. ಈ ರೀತಿ ವಿಷ ಬೀಜ ಬಿತ್ತುವುದನ್ನ ಸರ್ಕಾರ ನಿಲ್ಲಿಸಬೇಕು ಎಂದು ಅವರು ಹೇಳಿದರು. ಕಾಂಗ್ರೆಸ್ ಅಧಿಕಾರ ಇದ್ದಾಗ ರೆಹಮಾನ್ ಖಾನ್ ಟಿಪ್ಪು ವಿವಿ ಮಾಡ್ತೆವೆ ಅಂದಾಗ ಬಿಜೆಪಿ ವಿರೋಧ ಮಾಡಿತ್ತು. ಬೀದಿಗೆ ಇಳಿದು ವಿರೋಧ ಮಾಡಿದ್ರು. ಈಗ ಮುಸ್ಲಿಂ ಕಾಲೇಜ್​​ಗೆ ಯಾವ ಆಧಾರದ ಮೇಲೆ ಅನುಮತಿ ಕೊಡುತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

Exit mobile version