Site icon PowerTV

ಮಂಗಳೂರು ಬಾಂಬ್ ಸ್ಫೋಟ ಪ್ರಕರಣ NIAಗೆ ಹಸ್ತಾಂತರ

ಮಂಗಳೂರು : ಬಾಂಬ್ ಸ್ಫೋಟ ಪ್ರಕರಣವನ್ನು, NIAಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ಶಶಿಕುಮಾರ್ ಮಾಹಿತಿ ನೀಡಿದ್ದಾರೆ.

ನಗರದ ಕಮಿಷನರ್ ಕಚೇರಿಗೆ ಆಗಮಿಸಿದ ಎನ್ಐಎ ಅಧಿಕಾರಿಗಳು, ಈ ಬಗ್ಗೆ ಪೊಲೀಸ್ ಕಮಿಷನರ್ ಶಶಿಕುಮಾರ್ ಮಾಹಿತಿಯನ್ನು ನೀಡಿದ್ದಾರೆ. ಇನ್ನು, ಆರೋಗ್ಯದಲ್ಲಿ ಚೇತರಿಕೆ ಕಂಡಿರುವ ಆರೋಪಿ ಮೊಹಮ್ಮದ್‌ ಶಾರೀಕ್ , ವೈದ್ಯರ ಸೂಚನೆಯಂತೆ ಶಾರೀಕ್ ಬಳಿ ಪ್ರಶ್ನೆ ಕೇಳಿ ಉತ್ತರ ಪಡೆದ ಪೊಲೀಸರು, ಸಾಕಷ್ಟು ಮಾಹಿತಿಗಳನ್ನು ಸಂಗ್ರಹಿಸಿದ್ದಾಗಿ ಮಾಹಿತಿ ನೀಡಿದರು.

ಇನ್ನು, ಮುಂದಿನ ತನಿಖೆಯನ್ನು ಎನ್ಐಎ ಏಜನ್ಸಿ ಮಾಡಲಿದೆ, ತನಿಖೆಗೆ ಸಹಾಯ ನೀಡಲಿದ್ದೇವೆ. ಸುಟ್ಟ ಗಾಯ ಆಗಿರುವುದರಿಂದ ಎಷ್ಟು ಕಾಲ ಚಿಕಿತ್ಸೆ ಬೇಕಾಗಬಹುದೆಂದು ಹೇಳಕ್ಕಾಗಲ್ಲ. ಸದ್ಯಕ್ಕೆ ಚಿಕಿತ್ಸೆ ಮುಂದುವರಿದಿದೆ ಎಂದರು.

Exit mobile version