Site icon PowerTV

ಬಿಜೆಪಿ ಸರ್ಕಾರ ಬಂದ ಮೇಲೆ ಬರಿ ಆಶ್ವಾಸನೆ ನೀಡ್ತಿದ್ದಾರೆ : ಡಿ.ಕೆ.ಶಿವಕುಮಾರ್

ಕಲಬುರಗಿ : ಬಿಜೆಪಿ ಬರಿ ಭಾವನೆ ಬಗ್ಗೆ ಚರ್ಚೆ ಮಾಡ್ತಿದ್ದಾರೆ, ನಾವು ಬದುಕಿನ ಬಗ್ಗೆ ಚರ್ಚೆ ಮಾಡ್ತಿದ್ದೇವೆ ಎಂದು ಕಲಬುರಗಿ ನಗರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಬಂದ ಮೇಲೆ ಬರಿ ಆಶ್ವಾಸನೆ ನೀಡ್ತಿದ್ದಾರೆ.
ಬಿಜೆಪಿ ಬರಿ ಭಾವನೆ ಬಗ್ಗೆ ಚರ್ಚೆ ಮಾಡ್ತಿದ್ದಾರೆ, ನಾವು ಬದುಕಿನ ಬಗ್ಗೆ ಚರ್ಚೆ ಮಾಡ್ತಿದ್ದೇವೆಅವರ ಸಂಸ್ಕ್ರತಿ ಇದೀಗ ಹೊರ ಬರ್ತಿದೆ. ತಮ್ಮ ಮನೆಯಲ್ಲಿನ ಹೆಗ್ಗಣ ಬಿಟ್ಟು ಬೇರಕಡೆ ಹೆಗ್ಗಣ ತೋರಿಸುತ್ತಿದ್ದಾರೆ. ಅವರಿಗೆ ಕಾರ್ಯಕರ್ತರು ಇಲ್ಲಾ, ಹೀಗಾಗಿ ರೌಡಿಗಳನ್ನು ಸೇರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.

ಇನ್ನು, ಬಿಜೆಪಿಯವರಿಗೆ ಅಧಿಕಾರ ಕಳೆದುಕೊಳ್ಳೋ ಭಯ ಆರಂಭವಾಗಿದೆ. ಪ್ರಜಾಪ್ರಭುತ್ವಕ್ಕೆ ಕರ್ನಾಟಕದ ಗೌರವವಿತ್ತು. ಅದನ್ನು ಬಿಜೆಪಿ ಯವರು ಹಾಳು ಮಾಡುತ್ತಿದ್ದಾರೆ. ಪಕ್ಷ ಬಿಟ್ಟು ಅನೇಕರಿಗೆ ಆಹ್ವಾನ ನೀಡಿದ್ದೇವೆ. ರಾಜಕೀಯ ನಿಂತ ನೀರಲ್ಲಾ, ಅನೇಕ ಬದಲಾವಣೆ ಆಗುತ್ತವೆ. ಅವರಲ್ಲಿ ಅನೇಕ ಗುಂಪುಗಳಿವೆ. ಶೆಟ್ಟರ ಗುಂಪು, ಸದಾನಂದಗೌಡರ ಗುಂಪು, ಯತ್ನಾಳ ಗುಂಪು ಸೇರಿದಂತೆ ಅನೇಕ ಗುಂಪುಗಳಿವೆ. ಇದು ಬಿಜೆಪಿ ಸರ್ಕಾರವಲ್ಲಾ, ಅದು ಗುಂಪುಗಳ ಸಮ್ಮಿಶ್ರ ಸರ್ಕಾರ ಎಂದು ಹೇಳಿದರು.

Exit mobile version