Site icon PowerTV

ಮುಸ್ಲಿಂ ಕಾಲೇಜುಗಳ ಆರಂಭದ ಪ್ರಸ್ತಾವನೆಯೇ ಇಲ್ಲ; ಸಿಎಂ ಸ್ಪಷ್ಟನೆ

ಶಿವಮೊಗ್ಗ: ರಾಜ್ಯದಲ್ಲಿ ಮುಸ್ಲಿಂ ಮಹಿಳಾ ಕಾಲೇಜುಗಳ ಆರಂಭ ವಿಚಾರವಾಗಿ ಭದ್ರಾವತಿಯಲ್ಲಿ ಕಾರ್ಯಕ್ರಮಯೊಂದಕ್ಕೆ ಆಗಮಿಸಿದ  ವೇಳೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮಾತನಾಡಿದರು.

ರಾಜ್ಯದಲ್ಲಿ ಮುಸ್ಲಿಂ ಮಹಿಳಾ ಕಾಲೇಜುಗಳ ಆರಂಭಕ್ಕೆ ನಮ್ಮ ಬಳಿ ಯಾವುದೇ ರೀತಿಯ ಪ್ರಸ್ತಾವನೆಯೇ ಇಲ್ಲ. ಮುಸ್ಲಿಂ ಕಾಲೇಜ್ ಆರಂಭದ ಬಗ್ಗೆ ಸರ್ಕಾರಕ್ಕೆ ಯಾರೂ ಪ್ರಸ್ತಾವನೆ ಸಲ್ಲಿಸಿಲ್ಲ. ಮುಸ್ಲಿಂ ವಿದ್ಯಾರ್ಥಿಗಳು ತರಗತಿಗೆ ಹಾಜರಾಗುತ್ತಿದ್ದಾರೆ. ಯಾವುದೇ ಗೊಂದಲ ಇಲ್ಲ. ಅವರ ಹೇಳಿಕೆ ನೀವು ಪ್ರಸ್ತಾಪ ಮಾಡ್ತಿದ್ದೀರಾ ಅಷ್ಟೇ ಎಂದರು.

ರಾಜ್ಯದಲ್ಲಿ  ಮುಸ್ಲಿಂ ಹೆಣ್ಣು ಮಕ್ಕಳಿಗಾಗಿ ಪ್ರತ್ಯೇಕ 10 ಕಾಲೇಜುಗಳನ್ನು ಸ್ಥಾಪಿಸಲು ರಾಜ್ಯ ಸರ್ಕಾರ ಮುಂದಾಗಿದೆ ಇದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು  ಮುಂದಿನ ತಿಂಗಳು ಶಂಕು ಸ್ಥಾಪನೆ ಮಾಡಲಿದ್ದಾರೆ ಎಂಬ ನಿರೀಕ್ಷೆ ಇದೆ.

Exit mobile version