Site icon PowerTV

ಪೊಲೀಸ್​ ಜೀಪ್​ನಿಂದ ಜಿಗಿದು ಯುವಕ ಸಾವು; CPI-PSI ಸೇರಿ ಐದು​ ಸಿಬ್ಬಂದಿಗಳು ಅಮಾನತು

ಚಾಮರಾಜನಗರ; ಪೊಲೀಸ್​ ಜೀಪ್ ನಿಂದ ಜಂಪ್ ಮಾಡಿ ಬಿದ್ದು, ಸಾವನ್ನಪ್ಪಿದ್ದ ಆರೋಪಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪ ಹಿನ್ನೆಲೆ ಐವರು ಪೊಲೀಸ್ ರ ಅಮಾನತು ಮಾಡಿ ಆದೇಶ ಮಾಡಲಾಗಿದೆ.

ಇತ್ತೀಚಿಗೆ ಪ್ರಕಣಯೊಂದರಲ್ಲಿ ಭಾಗಿಯಾದ್ದಾನೆಂದು ಆರೋಪಿಯನ್ನ ಪೊಲೀಸರು ಜೀಪಿನಲ್ಲಿ ಕರೆದೊಯ್ಯುತ್ತಿದ್ದರು. ಈ ವೇಳೆ ಆರೋಪಿ ಕೆಳಗೆ ಹಾರಿ ಯಳಂದೂರು ತಾಲೂಕಿನ ಕುಂತೂರುಮೋಳೆ ಗ್ರಾಮದ ನಿಂಗರಾಜು(21) ಎಂಬಾತ ಮೃತಪಟ್ಟಿದ್ದ. ಕರ್ತವ್ಯಲೋಪ ಎಸಗಿರುವ ಆರೋಪದ ಮೇಲೆ ಜಿಲ್ಲೆಯ ಯಳಂದೂರು ಸಿಪಿಐ ಶಿವಮಾದಯ್ಯ, ಪಿಎಸ್ಐ ಮಹದೇವಗೌಡ, ಎಎಸ್ಐ ಚೆಲುವರಾಜ್, ಹೆಡ್ ಕಾನ್ಸ್‌ಟೇಬಲ್ ಭದ್ರಮ್ಮ, ಕಾನ್ಸ್‌ಟೇಬಲ್ ಸೋಮಶೇಖರ್ ಅವರನ್ನ ಅಮಾನತು ಮಾಡಿ ಆದೇಶಿಸಲಾಗಿದೆ.

ಆರೋಪಿ ವಿರುದ್ಧ ಅಪ್ರಾಪ್ತೆಯನ್ನು ಅಪಹರಿಸಿದ ದೂರು ದಾಖಲಾಗಿತ್ತು. ಮಂಗಳವಾರ ಆತನನ್ನು ಪೊಲೀಸರು ಠಾಣೆಗೆ ಕರೆದೊಯ್ಯವಾಗ ಪರಾರಿಯಾಗಲು ಜೀಪಿನಿಂದ ಲಿಂಗರಾಜು ಹಾಜರಿದ್ದರು. ತೀವ್ರವಾಗಿ ಗಾಯಗೊಂಡು ಬಳಿಕ, ಆಸ್ಪತ್ರೆಗೆ ರವಾನಿಸಿದರೂ ಯುವಕ ಮೃತಪಟ್ಟಿದ್ದ.

Exit mobile version