Site icon PowerTV

NDTV ಮಾಲೀಕ ಸಂಸ್ಥೆಗೆ ಪ್ರಣಾಯ್‌, ರಾಧಿಕಾ ರಾಯ್‌ ರಾಜೀನಾಮೆ

‘ಎನ್‌ಡಿಟಿವಿ’ ಎಂದೇ ಪ್ರಖ್ಯಾತವಾಗಿರುವ ನ್ಯೂ ಡೆಲ್ಲಿ ಟೆಲಿವಿಷನ್‌ (NDTV)ನ ಸಂಸ್ಥಾಪಕರು ಮತ್ತು ಮಾಲೀಕರಾಗಿದ್ದ ಪ್ರಣಾಯ್‌ ರಾಯ್ ಹಾಗೂ ಪತ್ನಿ ರಾಧಿಕಾ ರಾಯ್ ಆರ್‌ಆರ್‌ಪಿಆರ್‌ ಹೋಲ್ಡಿಂಗ್ ಪ್ರೈವೇಟ್ ಲಿಮಿಟೆಡ್ (ಆರ್‌ಆರ್‌ಪಿಆರ್‌ಎಚ್‌ಎಲ್‌) ಮಂಡಳಿಯ ನಿರ್ದೇಶಕರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ನವೆಂಬರ್‌ 29ರಿಂದ ಜಾರಿಗೆ ಬರುವಂತೆ ಈ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಕಂಪನಿಯು ಮಂಗಳವಾರ ಷೇರು ಮಾರುಕಟ್ಟೆಗೆ ಸಲ್ಲಿಸಿದ ದಾಖಲೆಗಳಲ್ಲಿ ತಿಳಿಸಿದೆ. ಎನ್‌ಡಿಟಿವಿಯ ಮಾಲೀಕ ಸಂಸ್ಥೆಯಾಗಿದ್ದ ಆರ್‌ಆರ್‌ಪಿಆರ್‌ ಹೋಲ್ಡಿಂಗ್‌ ಲಿ. ವಾಹಿನಿಯಲ್ಲಿ ಶೇ. 29.18 ಪಾಲನ್ನು ಹೊಂದಿದೆ. ಇದನ್ನು ಅದಾನಿ ಸಮೂಹವು ಇತ್ತೀಚೆಗಷ್ಟೇ ಸ್ವಾಧೀನಪಡಿಸಿಕೊಂಡಿತ್ತು. ಆರ್‌ಆರ್‌ಪಿಆರ್ ಹೋಲ್ಡಿಂಗ್‌ನ ಮಂಡಳಿಯು ಸುದೀಪ್ತ ಭಟ್ಟಾಚಾರ್ಯ, ಸಂಜಯ್ ಪುಗಾಲಿಯಾ ಮತ್ತು ಸೆಂಥಿಲ್ ಸಿನ್ನಯ್ಯ ಚೆಂಗಲ್ವರಾಯನ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಿರ್ದೇಶಕರನ್ನಾಗಿ ನೇಮಿಸಲು ಅನುಮೋದಿಸಿದೆ ಎಂದು ಎನ್‌ಡಿಟಿವಿಯು ಷೇರು ಮಾರುಕಟ್ಟೆಗೆ ಸಲ್ಲಿಸಿದ ದಾಖಲೆಗಳಲ್ಲಿ ತಿಳಿಸಿದೆ.

Exit mobile version