Site icon PowerTV

ನಮ್ಮ ಪಕ್ಷ ರೌಡಿಶೀಟರ್​ನ್ನ ಸೇರಿಸಿಕೊಳ್ಳುವ ಪ್ರಶ್ನೆಯೇ ಇಲ್ಲ: ಕೆ ಸುಧಾಕರ್​​​

ಹಾಸನ: ಕುಖ್ಯಾತ ರೌಡಿ ಶೀಟರ್​​ ಸೈಲೆಂಟ್ ಸುನೀಲ್ ಜೊತೆ ಬಿಜೆಪಿ ನಾಯಕರು ವೇದಿಕೆ ಹಂಚಿಕೆ ವಿಚಾರವಾಗಿ ಹಾಸನದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಕೆ.ಸುಧಾಕರ್ ಮಾತನಾಡಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಶ್ವತ್ಥ್ ನಾರಾಯಣ್ ಅವರು ಫಿಲಾಸಫಿಕಲ್ ಆಗಿ ಹೇಳಿದ್ದಾರೆ. ಒಬ್ಬ ವ್ಯಕ್ತಿ ತಪ್ಪು ಮಾಡಿ ಶಿಕ್ಷೆ ಆದ ಮೇಲೆ ಆ ತಪ್ಪನ್ನು ತಿದ್ದಿಕೊಳ್ಳಲು ಅವಕಾಶವಿದೆ ಅಂತ ಹೇಳಿದ್ದಾರೆ. ನಾನೇ ಆ ವಿಚಾರಕ್ಕೆ ಮೊದಲು ರಿಯಾಕ್ಷನ್ ಕೊಟ್ಟಿದ್ದು, ನಮ್ಮ ಪಕ್ಷ ಅಂತಹ ರೌಡಿಶೀಟರ್, ಕ್ರಿಮಿನಲ್ ಹಿನ್ನಲೆಯಲ್ಲಿ ಇರುವವರನ್ನು ಸೇರಿಸುವಂತಹ ಪ್ರಶ್ನೆಯೇ ಇಲ್ಲವೆಂದು ಈಗಾಗಲೇ ನಮ್ಮ‌ ರಾಜ್ಯಾಧ್ಯಕ್ಷರು ಬಹಳ ಸ್ಪಷ್ಟವಾಗಿ ಹೇಳಿದ್ದಾರೆ.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಾತ್ರ ರಾಜ್ಯಕ್ಕೆ ಉಳಿಗಾಲ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಮಾತನಾಡಿದ ಸುಧಾಕರ್​, ಅವರಿಗೆ ಉಳಿಗಾಲ ಇಲ್ಲ, ರಾಜ್ಯಕ್ಕೆ ಉಳಿಗಾಲ್ಲನಾ? ಅವರಿಗೆ ಉಳಿಗಾಲ ಅಂತ ನಾನು ತಿಳಿದುಕೊಂಡಿದ್ದೇನೆ. ರಾಜ್ಯ ಸುಭೀಕ್ಷವಾಗಿದೆ. ಮುಂದಿನ ದಿನ ಸುಭೀಕ್ಷವಾಗಿರುತ್ತದೆ. ಯಾರು ಇರಲಿ, ಯಾರು ಇಲ್ಲದೇ ಇರಲಿ ವ್ಯವಸ್ಥೆ, ರಾಜ್ಯ ಅನ್ನೋದು ಮುಂದುವರೆದುಕೊಂಡು ಹೋಗುತ್ತದೆ.

ಕಾಂಗ್ರೆಸ್ ಪಕ್ಷ ಬಿಟ್ಟಿದ್ದಕ್ಕೆ ಜನ ನನ್ನನ್ನು ಸೋಲಿಸಿದ್ರು ಎಂಬ ಎಂಟಿಬಿ ನಾಗರಾಜ್ ಹೇಳಿಕೆ ವಿಚಾರವಾಗಿ ಮಾತನಾಡಿದ ಸುಧಾಕರ್​, ಅವರು ಆ ತರ ಹೇಳಿಲ್ಲ. ನನ್ನಂತಹ ಒಳ್ಳೆಯ ವ್ಯಕ್ತಿಯನ್ನ, ಹಗಲಿರುಳು ಕ್ಷೇತ್ರದ ಕೆಲಸ ಮಾಡುವವರನ್ನು ಸೋಲಿಸಿದ್ರಲಾ ನನಗೆ ನೋವಾಗುತ್ತದೆ ಅಂತ ಹೇಳಿದ್ದಾರೆ. ನಾನು, ಸಚಿವ ಆರ್​. ಅಶೋಕ್ ಎಲ್ಲರೂ ವೇದಿಕೆಯಲ್ಲಿದ್ದೇವು ಎಂದರು.

Exit mobile version