Site icon PowerTV

15 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದು ಪರಾರಿಯಾದ ಪ್ರಿಯತಮ

ಬೆಂಗಳೂರು : ಮದುವೆ ಆಗುತ್ತಿನಿ ಅಂತಾ ನಂಬಿಸಿ 15 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದು ಪರಾರಿಯಾದ ಘಟನೆ ಬೆಂಗಳೂರಿನ ಬಸವೇಶ್ವರ ನಗರದಲ್ಲಿ ನಡೆದಿದೆ.

ಪ್ರದೀಪ್ ಎಂಬಾತನಿಂದ ಪ್ರಿಯತಮೆ ಮಹಿಳೆ ಮನೆಯಲ್ಲಿ ಕಳ್ಳತನ ಮಾಡಿದ್ದಾನೆ. ಮಹಿಳೆ ಪತಿ ತೀರಿಹೋಗಿದ್ದು ಹೆಣ್ಣು ಮಗು ಜೊತೆಗೆ ವಾಸವಿದ್ದಾಳೆ. ಆಗ ಪರಿಚಯ ಆಗಿ ಮನೆ ಸೇರಿಕೊಂಡ ವಿವಾಹಿತ ಪ್ರದೀಪ್, ನನಗೆ ಮದುವೆ ಆಗಿಲ್ಲ. ನಿನ್ನೇ ಪ್ರೀತಿಸುವೆ ಎಂದು ಆಕೆಯ ಮನೆಯಲ್ಲೇ ಉಳಿದುಕೊಂಡಿದ್ದ. ನಿನ್ನನ್ನೇ ಮದುವೆ ಆಗುತ್ತೇನೆಂದು ನಂಬಿಸಿದ್ದ ಮೋಸ ಮಾಡಿದ್ದಾನೆ.

ಇನ್ನು, ಮನೆಯಲ್ಲಿದ್ದ ಚಿನ್ನಾಭರಣ ಕದ್ದು ಪರಾರಿಯಾಗಿದ್ದು, ನೊಂದ ಮಹಿಳೆಯಿಂದ ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ಆರೋಪಿ ಪ್ರದೀಪ್ ನನ್ನ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Exit mobile version