Site icon PowerTV

ಸಮಾಜಕ್ಕೆ ಕಂಟಕವಾಗಿ ಕಾರ್ಯ ಮಾಡಿದ್ದು ಕಾಂಗ್ರೆಸ್ ಪಕ್ಷ : ಅಶ್ವತ ನಾರಾಯಣ್

ಧಾರವಾಡ : ಧರ್ಮ ಆಚರಣೆ, ಭಾವನೆ, ಗೌರವಿಸದೇ ಸಮಾಜಕ್ಕೆ ಕಂಟಕವಾಗಿ ಕಾರ್ಯ ಮಾಡಿದ್ದು ಕಾಂಗ್ರೆಸ್ ಪಕ್ಷ ಎಂದು ಧಾರವಾಡದಲ್ಲಿ ಉನ್ನತ ಶಿಕ್ಷಣ ಸಚಿವ ಅಶ್ವತ ನಾರಾಯಣ್ ಹೇಳಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಪಕ್ಷದಲ್ಲಿ ಇದ್ದಾರೆ, ಅಧಿಕಾರದಲ್ಲಿ ಇಲ್ಲಾ, ಅವರೇ ಸ್ವಯಂ ಪ್ರೇರಿತವಾಗಿ ಬಂದು ಹಿರಿಯರಾಗಿ‌ ಕಿರಿಯರಿಗೆ ಅವಕಾಶ ಮಾಡಿ ಕೊಟ್ಟಿದ್ದಾರೆ. ಪ್ರತಿ ಪಕ್ಷದಲ್ಲೂ ಹಿರಿಯರು ಇದ್ದಾರೆ, ಕಳೆದ ಬಾರಿ ಸಿಎಂ ಇದ್ದಾಗ ಸಿದ್ದರಾಮಯ್ಯ ಅವರೇ ನಾನು ನಿವೃತ್ತಿ ಬಗ್ಗೆ ಸ್ವಯಂ ಘೋಷಣೆ ಮಾಡಿಕೊಂಡಿದ್ದರು.

ಇನ್ನು, ಕಾಂಗ್ರೆಸ್ ಪಕ್ಷ ಇದುವರೆಗೆ ಒಂದು ಸ್ಪಷ್ಟವಾದ ನಿಲುವು ಟ್ಟುಕೊಳ್ಳದೇ, ಕೇವಲ ಕುಟಂಬ ರಾಜಕಾರಣ, ಮತ್ತು ಸಮಾಜ ಒಡೆಯುವ ಕೆಲಸ ಮಾಡಿದೆ. ಧರ್ಮ ಆಚರಣೆ, ಭಾವನೆ, ಗೌರವಿಸದೇ ಸಮಾಜಕ್ಕೆ ಕಂಟಕವಾಗಿ ಕಾರ್ಯ ಮಾಡಿದ್ದು ಕಾಂಗ್ರೆಸ್ ಪಕ್ಷ, ಖರ್ಗೆ ಅವರು ತಮ್ಮ ಪಕ್ಷ ಏನು ಕೆಲಸ ಮಾಡಿದೆ, ಹೇಗೆ ಮಾಡಿದೆ ಎಂದು ಬಗ್ಗೆ ಅವಲೋಕನ ಮಾಡಿಕೊಳ್ಳಬೇಕು. ಯಾವ ನೆಲೆ ಇಲ್ಲದಂತ ಸ್ಥಿತಿ ಅವರಿಗೆ ಇದೆ, ಹತಾಶರಾಗಿ ಅವರು ಸಂಬಂಧ ಇಲ್ಲದ ಹೇಳಿಕೆ‌ ಕೊಡುತ್ತಿದ್ದಾರೆ. ಅವರ ಹೇಳಿಕೆ ಖಂಡಿಸುತ್ತೇನೆ ಎಂದು ಹೇಳಿದರು.

Exit mobile version