Site icon PowerTV

ಧರ್ಮದಂಗಲ್ ಆತಂಕದಲ್ಲಿದ್ದ ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ನಿರಾಳ

ಮಂಗಳೂರು : ಧರ್ಮದಂಗಲ್ ಆತಂಕದಲ್ಲಿದ್ದ ದ‌.ಕ ಜಿಲ್ಲೆಯ ಕಡಬ ತಾಲೂಕಿನ ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಸನ್ನಿಧಿಯಲ್ಲಿ ಚಂಪಾಷಷ್ಠಿ ಬ್ರಹ್ಮ ರಥೋತ್ಸವ ನಿರಾಳವಾಗಿ ನಡೆದಿದೆ.

ಹಿಂದು ಸಂಘಟನೆಗಳು ಜಾತ್ರೋತ್ಸವ ಆರಂಭದಲ್ಲೇ ಹಿಂದೂಯೇತರರಿಗೆ ವ್ಯಾಪಾರ ನಿರ್ಬಂಧ ಬ್ಯಾನರ್ ಅಳವಡಿಸಿದ್ದರಿಂದ, ಮುಸ್ಲಿಂ ವ್ಯಾಪಾರಿಗಳು ‌ವ್ಯಾಪಾರದಲ್ಲಿ ತೊಡಗಿಕೊಳ್ಳದೆ ಇದ್ದರು. ಎಲ್ಲ ವ್ಯಾಪಾರಿಗಳ ಮೇಲೆ ಹಿಂದು ಸಂಘಟನೆಗಳು ಹದ್ದಿನ ಕಣ್ಣು ಇಟ್ಟು ನಿಗಾವಹಿಸಿದ್ದರು.ದೇವಸ್ಥಾನಕ್ಕೆ ಹಿಂದುಯೇತರ ವಾಹನಗಳು ಆಗಮಿಸದಂತೆ ನಿರ್ಬಂಧ ಹೇರಲಾಗಿತ್ತು.ಈ ಬಿಸಿಯ ಮಧ್ಯೆಯು ಸಂಘರ್ಷವಿಲ್ಲದೇ ಸಂಪನ್ನಗೊಂಡ ಕುಕ್ಕೆಯ ಚಂಪಾಷಷ್ಠಿ ‌ಮಹೋತ್ಸವ ನಿರಾತಂಕವಾಗಿ ನಡೆಯಿತು.

Exit mobile version