Site icon PowerTV

ಗದಗ ಜಿಲ್ಲೆಯಲ್ಲಿ ಮತ್ತೊಂದು ನವಜಾತ ಶಿಶು ಪತ್ತೆ.

ಗದಗ : ಹೆತ್ತವರ ಅಮಾನವೀಯ ವರ್ತನೆಗಳಿಂದಾಗಿ ಕಂದಮ್ಮಗಳು ಅನಾಥವಾಗುತ್ತಿರುವ ಘಟನೆಗಳು ಅಲ್ಲಲ್ಲಿ ಆಗಾಗ ಕಂಡು ಬರುತ್ತಲೇ ಇದ್ದು, ಮತ್ತೊಂದು ನವಜಾತ ಶಿಶು ಗದಗ ಜಿಲ್ಲೆಯ ಶಿರಹಟ್ಟಿ ಪಟ್ಟಣದಲ್ಲಿ ಪತ್ತೆಯಾಗಿದೆ.

ಒಂದೂವರೆ ತಿಂಗಳ ಹಸುಗೂಸುನ್ನು ನಡುರಸ್ತೆಯಲ್ಲಿ ಕ್ರೂರಿಗಳು ಬಿಟ್ಟಿದ್ದು, ಸ್ಥಳೀಯರು ತಹಶಿಲ್ದಾರರಿಗೆ ಮಾಹಿತಿ ನೀಡಿದ್ದಾರೆ. ಶಿರಹಟ್ಟಿ ತಹಶಿಲ್ದಾರ ಕಲ್ಲನಗೌಡ ಪಾಟೀಲ್ ಕಂದಮ್ಮನ ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.ಶಿರಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದ್ದಿದ್ದು, ಪಾಪಿ ಪಾಲಕರ ಪತ್ತೆಗೆ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.

Exit mobile version