Site icon PowerTV

ಮೈಸೂರಿನಲ್ಲಿ ಬಸ್​​ ಶೆಲ್ಟರ್​​​ ಮೇಲಿನ ಗುಂಬಜ್​​​​​​​ ತೆರವು

ಮೈಸೂರು :  ಭಾರೀ ವಿವಾದಕ್ಕೀಡಾಗಿದ್ದ ಬಸ್ ಶೆಲ್ಟರ್ ಮೇಲಿನ ಗುಂಬಜ್‌ಗಳನ್ನು ರಾತ್ರೋರಾತ್ರಿ ತೆರವು ಮಾಡಲಾಗಿದೆ.ಈ ಬಗ್ಗೆ ಟ್ವೀಟ್ ಮಾಡಿರುವ ಸಂಸದ ಪ್ರತಾಪ್ ಸಿಂಹ ಮಧ್ಯದಲ್ಲೊಂದು ದೊಡ್ಡ ಗುಂಬಜ್, ಅಕ್ಕಪಕ್ಕದಲ್ಲಿ ಎರಡು ಚಿಕ್ಕ ಗುಂಬಜ್ ಇದ್ದರೆ ಅದು ಮಸೀದೀನೇ. ಅದನ್ನು ತೆರವು ಮಾಡಿಸುತ್ತೇನೆ ಎಂದಿದ್ದೆ. ಅದರಂತೆ ನಡೆದುಕೊಂಡಿದ್ದೇನೆ.ಕಾಲಾವಕಾಶ ಕೇಳಿ ಮಾತಿನಂತೆ ನಡೆದ ಜಿಲ್ಲಾಧಿಕಾರಿ ಹಾಗೂ ಜನಾಭಿಪ್ರಾಯಕ್ಕೆ ತಲೆಬಾಗಿದ ರಾಮದಾಸ್‌ಗೆ ಧನ್ಯವಾದ ಅರ್ಪಿಸಿದ್ದಾರೆ.

ಬಸ್ ಶೆಲ್ಟರ್ ಮೇಲಿನ ಗುಂಬಜ್ ತೆರವು ಬಳಿಕ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಶಾಸಕ S.A.ರಾಮದಾಸ್, ವಿವಾದಕ್ಕೆ ಬೇಸರ ಹೊರಹಾಕಿದ್ದಾರೆ‌. ವಿವಾದದ ಬಸ್ ನಿಲ್ದಾಣ ಗೋಪುರ ತೆರವಾಗಿದೆ. ಅರಮನೆ ಮಾದರಿ ನನ್ನ ಉದ್ದೇಶವಾಗಿತ್ತು. ಅನವಶ್ಯಕ ಧರ್ಮದ ಲೇಪನ ನೀಡಿದ್ದು ನೋವು ತಂದಿದೆ‌. ಬಸ್ ಶೆಲ್ಟರ್ ವಿವಾದದ ಕೇಂದ್ರ ಆಗ್ಬಾರದು ಅನ್ನೋ ಕಾರಣಕ್ಕೆ ತೆರವು ಮಾಡಿದ್ದಾಗಿ ತಿಳಿಸಿದ್ದಾರೆ.

ಇನ್ನು ಬಿಜೆಪಿ ಇಬ್ಬರು ನಾಯಕರ ಕಚ್ಚಾಟವನ್ನು ಖಂಡಿಸಿರುವ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್, ಇದು ಇಬ್ಬರು ಅವಿವೇಕಿಗಳ ಜಗಳ ಎಂದು ಕಿಡಿ ಕಾರಿದ್ದಾರೆ. ಪ್ರತಾಪ ಸಿಂಹಗೆ ತಲೆನೂ ಇಲ್ಲ ಬುದ್ಧಿನೂ ಇಲ್ಲ, ಅತ್ಯಂತ ಸಣ್ಣ ವ್ಯಕ್ತಿ ಎಂದಿದ್ದಾರೆ.

ಒಟ್ಟಿನಲ್ಲಿ, ಮೈಸೂರಿನಲ್ಲಿ ಭಾರೀ ವಿವಾದಕ್ಕೀಡಾಗಿದ್ದ ಬಸ್ ಶೆಲ್ಟರ್ ಬಡಿದಾಟ ತಣ್ಣಗಾದಂತಿದ್ದು, ಆಡಳಿತ ಪಕ್ಷದ ಇಬ್ಬರು ನಾಯಕರ ಕಿತ್ತಾಟ ಬಿಜೆಪಿಗೆ ಡ್ಯಾಮೇಜ್ ಮಾಡಿದೆ.

Exit mobile version