Site icon PowerTV

ಎಲ್ಲಿ ನೋಡಿದ್ರೂ ಬೌವ್​​​-ಬೌವ್​​​​ಗಳದ್ದೇ ದರ್ಬಾರ್​​​​​​​​​

ಹಾಸನ :  ನಗರದ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದಲ್ಲಿ ಕೆನಲ್ ಕ್ಲಬ್ ವತಿಯಿಂದ ಮೂರನೇ ವರ್ಷದ ಶ್ವಾನಗಳ ಪ್ರದರ್ಶನವನ್ನ‌ ಆಯೋಜಿಸಲಾಗಿತ್ತು. ಸುಮಾರು 25 ತಳಿಯ 300 ಕ್ಕೂ ಹೆಚ್ಚು ಶ್ವಾನಗಳು ಭಾಗಿಯಾಗಿ ಗಮನ ಸೆಳೆದವು. ಮಾಲೀಕರು ಹೇಳಿದಂತೆ ಶ್ವಾನಗಳು ಹೆಜ್ಜೆ ಹಾಕಿದ್ದು, ಓಡಾಡಿದ ರೀತಿ ಎಲ್ಲರಲ್ಲೂ ಖುಷಿ ತರಿಸಿತು.

ಒಂದಕ್ಕಿಂತ ಒಂದು ಚೆಂದ ಅನ್ನುವ ಹಾಗೆ, ಸಣ್ಣ ಗಾತ್ರದ ಶ್ವಾನದಿಂದ ಹಿಡಿದು ಬೃಹತ್ ಗಾತ್ರದ ನಾಯಿಗಳೂ ಸ್ಪರ್ಧೆಯಲ್ಲಿ ಭಾಗಿಯಾಗಿದ್ದವು. ಪ್ರದರ್ಶನದಲ್ಲಿ ಭಾಗಿಯಾಗಿದ್ದ ಎಲ್ಲಾ ನಾಯಿಗಳಿಗೂ ಸರ್ಟಿಫಿಕೇಟ್ ವಿತರಿಸಲಾಯಿತು.

ಸಚಿನ್ ಶೆಟ್ಟಿ, ಪವರ್ ಟಿವಿ, ಹಾಸನ.

Exit mobile version