Site icon PowerTV

ಜಾತ್ರಾ ಮಹೋತ್ಸವಗಳ ವಿಚಾರದಲ್ಲಿ ಮುಂದುವರೆದ ಧರ್ಮ ದಂಗಲ್

ಬೆಂಗಳೂರು : ಜಾತ್ರಾ ಮಹೋತ್ಸವಗಳಲ್ಲಿ , ಹಿಂದೂಗಳಿಗೆ ಮಾತ್ರ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಬೇಕು ಎಂದು ಬೆಂಗಳೂರಿನ ಬಜರಂಗದಳದಿಂದ ಮನವಿ ಮಾಡಲಾಗಿದೆ.

ನಗರದಲ್ಲಿ ಮುಸ್ಲಿಮರಿಗೆ ಜಾತ್ರೆಗಳಲ್ಲಿ ವ್ಯಾಪಾರ ವಹಿವಾಟು ನಡೆಸಲು ಅವಕಾಶ ನೀಡಬಾರದು, ಸುಬ್ರಹ್ಮಣ್ಯಸ್ವಾಮಿ ಜಾತ್ರೆಯಲ್ಲಿ ವ್ಯಾಪಾರಕ್ಕೆ ಅವಕಾಶ ನೀಡದಂತೆ ಮನವಿ ಮಾಡಿದ್ದಾರೆ. ಇನ್ನು, ಬೆಂಗಳೂರಿನ ವಿವಿ ಪುರಂನ ಸಜ್ಜನ್ ರಾವ್ ಸರ್ಕಲ್‌ನಲ್ಲಿರುವ ದೇವಾಲಯ, ಬೆಳ್ಳಿತೇರಿನ ಸಂದರ್ಭದಲ್ಲಿ ವ್ಯಾಪಾರಕ್ಕೆ ಅವಕಾಶ ನೀಡದಂತೆ ಮನವಿ ಮಾಡಲಾಗಿದೆ.

ಅದಲ್ಲದೇ, ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದ ಬಜರಂಗದಳ, ಜೊತೆಗೆ ಬಿಬಿಎಂಪಿ ಮುಖ್ಯ ಆಯುಕ್ತರಿಗೂ ತುಷಾರ್ ಗಿರಿನಾಥ್‌ಗೆ ಮನವಿ ಮಾಡಿದ್ದಾರೆ.

Exit mobile version