Site icon PowerTV

ಬಿವಿವಿ ಸಂಘದ ಕಾಲೇಜು ಕ್ಯಾಂಪಸ್‌ನಲ್ಲಿ ಅಮೃತ ಸುವರ್ಣ ಸಂಗಮ

ಬಾಗಲಕೋಟೆ :  ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಬಸವೇಶ್ವರ ಕಾಲೇಜು ಕ್ಯಾಂಪಸ್ ನಲ್ಲಿ ಅಮೃತ ಸುವರ್ಣ ಸಂಗಮ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಆಗಮಿಸಿದ ಡಾ.ಕೆ ಕಸ್ತೂರಿ ರಂಗನ್ ಅವರಿಗೆ ಅದ್ದೂರಿ ಸ್ವಾಗತ ಕೊರಿದ್ರು ಬಿವಿವಿ ಸಂಘದ ಸಿಬ್ಬಂದಿ ಹಾಗೂ ಶಿಕ್ಷಕರು.ಬಳಿಕ ಭವ್ಯ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಸವೇಶ್ವರ ಕಲಾ ಹಾಗೂ ವಿಜ್ಞಾನ ಮಹಾವಿದ್ಯಾಲಯಗಳ ಅಮೃತ ಮಹೋತ್ಸ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಸುವರ್ಣ ಮಹೋತ್ಸವ ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗಿಸುವ ಮೂಲಕ ವಿಜ್ಞಾನಿ ಕಸ್ತೂರಿ ರಂಗನ್ ಚಾಲನೆ ನೀಡಿದ್ರು.

ಕಾರ್ಯಕ್ರಮದ ವೇದಿಕೆಯಲ್ಲಿ ಪ್ರಭು ಮಹಾಸ್ವಾಮಿಗಳು ಸಚಿವ ಕಾರಜೋಳ,ಸಂಸದ ಗದ್ದಿಗೌಡರ,ಪ್ರಭಾಕರ ಕೋರೆ ಅತಿಥಿಗಳಾಗಿ ಭಾಗಿಯಾಗಿದ್ರೆ, ಅಧ್ಯಕ್ಷತೆಯನ್ನ ಬಿವಿವಿ ಸಂಘದ ಕಾರ್ಯಾಧ್ಯಕ್ಷ ಶಾಸಕ ವೀರಣ್ಣ ಚರಂತಿಮಠ್ ವಹಿಸಿದ್ರು.ಇದೇ ವೇಳೆ ಮಾತನಾಡಿದ ಡಾ. ಕಸ್ತೂರಿ ರಂಗನ್ ಬಿವಿವಿ ಸಂಘದ ಕಾರ್ಯ ವೈಖರಿ ಕುರಿತು ಮುಕ್ತ ಕಂಠದಿಂದ ಬಣ್ಣಿಸಿದ್ರು.

Exit mobile version