Site icon PowerTV

ಹೃದಯಾಘಾತದಿಂದ ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರು ನಿಧನ

ಬೆಂಗಳೂರು : ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಶ್ರೀಶೈಲಪ್ಪ ಬಿದರೂರು ಚಿಕಿತ್ಸೆ ಫಲಿಸದೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಶ್ರೀಶೈಲಪ್ಪ ಬಿದರೂರು ಅವರು ಇಂದು ಟಿಕೆಟ್​ ಆಕಾಂಕ್ಷಿಗಳ ಸಭೆಗೆ ಆಗಮಿಸಿದ್ದರು. ಆಕಾಂಕ್ಷಿಗಳ ಸಭೆಯಲ್ಲಿ ಭಾಗಿಯಾಗಿದ್ದ ಬಿದರೂರು. ಸಭೆಯಲ್ಲಿ ಹೃದಯಾಘಾತವಾಗಿ ವಾಂತಿ ಮಾಡಿಕೊಂಡರು. ತಕ್ಷಣಕ್ಕೆ ಆಸ್ಪತ್ರೆಗೆ ಕಾರ್ಯಕರ್ತರು ಕರೆದೊಯ್ದಿದ್ದಾರೆ.

ಇನ್ನು, ಯಡಿಯೂರಪ್ಪ ಆಪ್ತರಾಗಿದ್ದ ಶ್ರೀಶೈಲಪ್ಪ ಬಿದರೂರು, ವರ್ತೂರು ಕೋಡಿ ಬಳಿಯ ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಇಂದು ನಡೆಯಬೇಕಿದ್ದ ಸೀಕ್ರೆಟ್ ಸಭೆ ರದ್ದಾಗಿದೆ.

Exit mobile version