Site icon PowerTV

ಮರಾಠಿ ಪುಂಡರಿಂದ KSRTC ಬಸ್​​​ಗೆ ಮಸಿ

ಮಹಾರಾಷ್ಟ್ರ-ಕರ್ನಾಟಕದ ಗಡಿ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ಅಂತೆಯೇ ಮಹಾರಾಷ್ಟ್ರದ ಪುಂಡರ ಅಟ್ಟಹಾಸ ಸಹ ಜೋರಾಗಿ ನಡೆಯುತ್ತಿದೆ. ಮಹಾರಾಷ್ಟ್ರದಲ್ಲಿ ಕೆಲ ಪುಂಡರ ಗುಂಪು, ಕರ್ನಾಟಕ ಬಸ್‌ಗೆ ಕಪ್ಪು ಮಸಿದು ವಿಕೃತಿ ಮೆರೆದಿದ್ದಾರೆ.

ಮರಾಠಿ ಭಾಷಿಕ ಪುಂಡರು ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯ ದೌಂಡ್ ಗ್ರಾಮದಲ್ಲಿ KSRTC ಬಸ್‌ಗೆ ಮಸಿ ಬಳಿದು ಪುಂಡಾಟಿಕೆ ನಡೆಸಿದ್ದಾರೆ. ಅಖಿಲ ಭಾರತೀಯ ಮರಾಠಾ ಸಂಘದ ಕಾರ್ಯಕರ್ತರು, ನಿಪ್ಪಾಣಿ ಮತ್ತು ಔರಂಗಾಬಾದ್ ಮಧ್ಯೆ ಸಂಚರಿಸುವ ನಿಪ್ಪಾಣಿ ಡಿಪೋಗೆ ಸೇರಿದ KSRTC ಬಸ್‌ಗೆ ಮಸಿ ಬಳಿದಿದ್ದಾರೆ.

CM ಬಸವರಾಜ ಬೊಮ್ಮಾಯಿಯವರು, ಜತ್ತ ತಾಲೂಕಿನ 40 ಗ್ರಾಮ ಕರ್ನಾಟಕಕ್ಕೆ ಸೇರಬೇಕೆಂದು ಠರಾವು ಹೊರಡಿಸಿದ್ದರು. ಇದಕ್ಕೆ ಮಹಾರಾಷ್ಟ್ರದ ಮರಾಠಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಹಾರಾಷ್ಟ್ರ ನಮ್ಮ ಹಕ್ಕುಯಾರಪ್ಪನದಲ್ಲ ಎಂದು ಆಕ್ರೋಶಗೊಂಡಿದ್ದಾರೆ. ಬೆಳಗಾವಿ, ನಿಪ್ಪಾಣಿ, ಖಾನಾಪುರ, ಬೀದರ್, ಭಾಲ್ಕಿ ಸಂಯುಕ್ತ ಮಹಾರಾಷ್ಟ್ರಕ್ಕೆ ಸೇರಬೇಕೆಂದು ಪುಂಡರು ಘೋಷಿಸಿ, ಪುಂಡಾಟ ಮೆರೆದಿದ್ದಾರೆ.

Exit mobile version