Site icon PowerTV

ಓಲಾ, ಉಬರ್​ಗೆ ನೂತನ ದರ ನಿಗದಿ

ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಜನರಿಗೆ ಬರೆ ಎಳೆಯುತ್ತಿದ್ದ ಒಲಾ, ಉಬರ್‌ ಹಾಗೂ ರಾಪಿಡೋ ಅಟೋಗಳಿಗೆ ನೂತನ ದರ ಫಿಕ್ಸ್‌ ಮಾಡಿ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ.

ಹೈಕೋರ್ಟ್‌ ಸೂಚನೆಯಂತೆ ಇಂದಿನ ಸಭೆಯಲ್ಲಿ ಸಾರಿಗೆ ಇಲಾಖೆ ದರವನ್ನು ಫಿಕ್ಸ್‌ ಮಾಡಿದೆ. ಮಿನಿಮಮ್ ಚಾರ್ಜ್ ಜೊತೆಗೆ ಶೇ.5ರಷ್ಟು ದರವನ್ನು ಫಿಕ್ಸ್‌ ಮಾಡಿ ಸಾರಿಗೆ ಇಲಾಖೆ ಆದೇಶ ಪ್ರಕಟಿಸಿದೆ.

ಮಿನಿಮಮ್ ಚಾರ್ಜ್ 30, 40, 60 ಇದ್ರು ಅದರ ಜೊತೆಗೆ ಶೇ. 5ರಷ್ಟು ದರವನ್ನು ಮಾತ್ರ ಸಾರಿಗೆ ಇಲಾಖೆ ಹೆಚ್ಚಿಸಿದೆ. 30+ 5 % ಹೆಚ್ಚಿನ ದರದ ಜೊತೆಗೆ + 5% ಜಿಎಸ್ಟಿ ಸೇರಿಸಲು ಆದೇಶ ನೀಡಲಾಗಿದೆ. ಇದರ ಆದೇಶದ ಪ್ರತಿಯನ್ನು ಸ್ವತಃ ಸಾರಿಗೆ ಇಲಾಖೆಯೇ ಹೈಕೋರ್ಟ್‌ಗೆ ಸಲ್ಲಿಕೆ ಮಾಡಲಿದೆ.

Exit mobile version