Site icon PowerTV

ಗೆಳೆಯನಿಗಾಗಿ ಡಾಲಿ ದೊಡ್ಡ ನಿರ್ಧಾರ.. ಟಗರು ಪಲ್ಯ ಶುರು

ಟಗರು ಚಿತ್ರದಿಂದ ಹಣೆಬರಹ ಬದಲಿಸಿಕೊಂಡ ಡಾಲಿ ಧನಂಜಯ, ಇದೀಗ ಪ್ರೇಕ್ಷಕಪ್ರಭುಗೆ ಟಗರು ಪಲ್ಯ ಉಣಬಡಿಸೋಕೆ ಸಜ್ಜಾಗಿದ್ದಾರೆ. ಆತ್ಮೀಯ ಗೆಳೆಯನಿಗಾಗಿ ಡಾಲಿಯ ರಿಸ್ಕ್ ಎಂಥದ್ದು ಅನ್ನೋದ್ರ ಜೊತೆ ಒಂದಷ್ಟು ಲೇಟೆಸ್ಟ್ ಸ್ಯಾಂಡಲ್​ವುಡ್ ಅಪ್ಡೇಟ್ಸ್ ಕೊಡ್ತೀವಿ. ಜಸ್ಟ್ ಎಂಜಾಯ್.

2018ರ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ ಟಗರು. ಅದು ಡಾ ಶಿವರಾಜ್​ಕುಮಾರ್ ಸಿನಿಮಾನೇ ಆದ್ರೂ, ಸುಕ್ಕಾ ಸೂರಿ ತಮ್ಮ ನಿರ್ದೇಶನದಿಂದ ಖಡಕ್ ಖಳನಾಯಕ ಡಾಲಿಯನ್ನ ಹುಟ್ಟುಹಾಕಿದ್ರು. ಹೌದು.. ನಟರಾಕ್ಷಸ ಡಾಲಿಯ ಉಗಮ ಅದೇ ಚಿತ್ರದಿಂದ ಆಯ್ತು. ಹೀರೋ ಆಗಿ ಪಡೆಯದ ನೇಮು ಫೇಮು, ವಿಲನ್ ಆಗಿ ಪಡೆದ್ರು ಧನಂಜಯ. ಇಂದಿಗೂ ಡಾಲಿ ಹೆಸ್ರಲ್ಲೇ ಧನು ವರ್ಲ್ಡ್​ ಫೇಮಸ್.

ಇದೀಗ ಅವ್ರ ಆತ್ಮೀಯ ಗೆಳೆಯ ನಾಗಭೂಷಣ್​ಗಾಗಿ ಟಗರು ಪಲ್ಯ ಅನ್ನೋ ಸಿನಿಮಾ ಮಾಡೋಕೆ ಮುಂದಾಗಿದ್ದಾರೆ ಡಾಲಿ. ತಮ್ಮದೇ ಹೋಮ್ ಬ್ಯಾನರ್ ಡಾಲಿ ಪಿಕ್ಚರ್ಸ್​ನಡಿ ಇದನ್ನ ನಿರ್ಮಿಸಲಿದ್ದು, ಡಿಸೆಂಬರ್​ನಿಂದ ಸಿನಿಮಾ ಸೆಟ್ಟೇರಲಿದೆ. ದಾವಣಗೆರೆಯಲ್ಲಿ ನಡೆದ ಹೆಡ್​ಬುಷ್ ಪ್ರೀ ರಿಲೀಸ್ ಇವೆಂಟ್​ನಲ್ಲಿ ಟಗರು ಪಲ್ಯ ಅಫಿಶಿಯಲಿ ಅನೌನ್ಸ್ ಮಾಡಿದ್ದ ಡಾಲಿ, ಇದೀಗ ಇಕ್ಕಟ್ ಚಿತ್ರದ ನಾಗಭೂಷಣ್​ನ ಮತ್ತೆ ಹೀರೋ ಆಗಿಸ್ತಿದ್ದಾರೆ. ಉಮೇಶ್ ಕೆ ಕೃಪ ನಿರ್ದೇಶನದ ಚೊಚ್ಚಲ ಚಿತ್ರ ಇದಾಗಲಿದ್ದು, ಹಳ್ಳಿ ಸೊಗಡಿನಲ್ಲಿ ತಯಾರಾಗಲಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

Exit mobile version