Site icon PowerTV

ಡಿಸೆಂಬರ್ 1 ರಿಂದ ಹೊರಡಲಿದೆ ಅಕ್ಷರ ರಥ

ಹಾವೇರಿ : ಸಿಎಂ ಬೊಮ್ಮಾಯಿ ಅವರ ರಾಜಕೀಯ ತವರು ಹಾವೇರಿಯಲ್ಲಿ ಜನವರಿ 6, 7 ಹಾಗೂ 8ರಂದು 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕರುನಾಡಿನಾದ್ಯಂತ ಸಂಚರಿಸಲು ಕನ್ನಡದ ರಥವನ್ನು ತಯಾರಿ ಮಾಡಲಾಗ್ತಿದೆ. ಡಿಸೆಂಬರ್​​​ 1 ರಂದು ಕನ್ನಡ ತೇರಿನ ಯಾತ್ರೆ ಆರಂಭವಾಗಲಿದ್ದು, ಇಡೀ ಕರ್ನಾಟಕವನ್ನು ಸುತ್ತಲಿದೆ.

ಜಾನಪದ ವಿಶ್ವ ವಿದ್ಯಾಲಯದಲ್ಲಿ H.S. ಮುದಕವಿಯವರ ನೇತೃತ್ವದಲ್ಲಿ 15ಕ್ಕೂ ಹೆಚ್ಚು ಕಲಾವಿದರು ಕಳೆದ 15 ದಿನಗಳಿಂದ ಕನ್ನಡದ ರಥವನ್ನ ಸಿದ್ದಗೊಳಿಸುತ್ತಿದ್ದಾರೆ. ಈ ರಥದಲ್ಲಿ ಕನ್ನಡಾಂಬೆಯ ಮೂರ್ತಿ, ಕರುನಾಡಿನ ಚಿತ್ರ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರವನ್ನು ಅಳವಡಿಸಲಾಗಿದೆ.

ಇದೇ ಮೊದಲ ಬಾರಿಗೆ ಕನ್ನಡದ ರಥ ಕರುನಾಡಿನ ತುಂಬೆಲ್ಲಾ ಸಂಚರಿಸುತ್ತಿದ್ದು, ಅಕ್ಷರ ಜಾತ್ರೆಗೆ ಹೊಸ ಪರಂಪರೆಯನ್ನು ಹುಟ್ಟಿ ಹಾಕಿದಂತಾಗಿದೆ.

ವೀರೇಶ ಬಾರ್ಕಿ,ಪವರ್ ಟಿವಿ ಹಾವೇರಿ

Exit mobile version