Site icon PowerTV

3ನೇ ಮಗುವಿನ ನಿರೀಕ್ಷೆಯಲ್ಲಿ ಮನೋಜ್​​ ತಿವಾರಿ

ನಟ ಕಮ್ ರಾಜಕಾರಣಿ ಮನೋಜ್ ತಿವಾರಿ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. 51ನೇ ವಯಸ್ಸಿನಲ್ಲಿ ತಂದೆಯಾಗುತ್ತಿದ್ದಾರೆ.

ಸದ್ಯ ಪತ್ನಿ ಸುರಭಿ ತಿವಾರಿ ಬೇಬಿ ಶವರ್ ವೀಡಿಯೋ ಹಂಚಿಕೊಳ್ಳುವ ಮೂಲಕ ಮನೋಜ್ ತಿವಾರಿ ಸದ್ದು ಮಾಡ್ತಿದ್ದಾರೆ. ಚಿತ್ರರಂಗದಲ್ಲಿ ನಟ, ಗಾಯಕ, ರಾಜಕಾರಣಿಯಾಗಿ ಗುರುತಿಸಿ ಸೈ ಎನಿಸಿಕೊಂಡಿರುವ ಮನೋಜ್ ತಿವಾರಿ ತಂದೆಯಾಗುತ್ತಿರುವ ಸಂಭ್ರಮದಲ್ಲಿದ್ದಾರೆ. ಮನೋಜ್ ಮತ್ತು ಸುರಭಿ ದಂಪತಿಗೆ ಈಗಾಗಲೇ ಇಬ್ಬರು ಮಕ್ಕಳಿದ್ದಾರೆ. ಈಗ ಮೂರನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಇತ್ತೀಚೆಗೆ ನಡೆದ ಪತ್ನಿ ಬೇಬಿ ಶವರ್ ಕಾರ್ಯಕ್ರಮದ ವೀಡಿಯೋವನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಎರಡನೇ ಪತ್ನಿಯ ಬೇಬಿ ಶವರ್ ಕಾರ್ಯಕ್ರಮ ತುಂಬಾ ಗ್ರ್ಯಾಂಡ್​ ಆಗಿ ನಡೆದಿದ್ದು, ಸುರಭಿ ತಿವಾರಿ ಕೆಂಪು ಡ್ರೆಸ್‌ನಲ್ಲಿ ಮಿಂಚಿದ್ದರೆ, ಮನೋಜ್ ಬೀಜ್ ಕುರ್ತಾದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಬೇಬಿ ಶವರ್ ವೀಡಿಯೋ ಸಂಭ್ರಮದ ಮೂಲಕ ಸದ್ದು ಮಾಡ್ತಿದ್ದಾರೆ.

Exit mobile version