Site icon PowerTV

ಜನರ ನಾಡಿ ಮಿಡಿತ ನೋಡಿದ್ರೆ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತೆ : ಸಿಟಿ. ರವಿ

ನವದೆಹಲಿ : ಜನರ ನಾಡಿ ಮಿಡಿತ ನೋಡಿದ್ರೆ, ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ದೆಹಲಿಯಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿಟಿ. ರವಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ತಿಂಗಳಿನಿಂದ ಗುಜರಾತ್ ನಲ್ಲಿ ಓಡಾಟ ಮಾಡ್ತೀದ್ದೇನೆ. ಜನರ ನಾಡಿ ಮಿಡಿತ ನೋಡಿದ್ರೆ, ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಮೋದಿ ನಾಯಕತ್ವದ ಎಫೆಕ್ಟ್ ಮತ್ತಷ್ಟು ಉಪಯೋಗವಾಗಲಿದೆ. ನರೇಂದ್ರ ಮತ್ತು ಭೂಪೇಂದ್ರ ಜೋಡಿ ಬಿಜೆಪಿಯ ದಾಖಲೆ ಬ್ರೇಕ್ ಮಾಡುತ್ತೆ ಎಂದರು.

ಅದಲ್ಲದೇ, ಕಾಂಗ್ರೆಸ್ ಪಳೆಯುಳಿಕೆ ಪಕ್ಷವಾಗಿದೆ. ಎಎಪಿ ಗ್ರೌಂಡ್ ನಲ್ಲಿ ಜೀರೋ ಕೇವಲ ಸೌಂಡ್ ಅಷ್ಟೇ, ಪೂತಣಿ ಪಾತ್ರ ಬರುತ್ತೆ ಅದೇ ರೀತಿ ಎಎಪಿ ಇರೋದು, ಮಹಾಭಾರತದಲ್ಲಿ ಕೃಷ್ಣನನ್ನು ಕೊಲ್ಲಲು ಬಂದು ಏನು ಸಾಧಿಸಲು ಆಗಿಲ್ಲ. ಹಾಗೆ ಸತ್ಯವಂತರು ಅಂತಾ ಹೇಳಿಕೊಂಡು ಬಂದು ಸಿಕ್ಕಿ ಹಾಕಿಕೊಂಡಿದ್ದಾರೆ ಎಂದು ಹೇಳಿದರು.

Exit mobile version