Site icon PowerTV

PFI ನಾಯಕರ ಜೊತೆ ಶಾರೀಕ್ ನಂಟು?

ಮಂಗಳೂರು :  ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಮುಖ ಆರೋಪಿ ಉಗ್ರ ಶಾರೀಕ್​​ನನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸಲಾಗ್ತಿದೆ. ವಿಚಾರಣೆ ಸ್ವರೂಪ ತೀವ್ರಗೊಂಡಂತೆ ಉಗ್ರನ ಒಂದೊಂದೇ ಮುಖ ಬಯಲಾಗ್ತಿದೆ.

ಉಗ್ರ ಶಾರೀಕ್‌ನ ಕರಾಳ ಸತ್ಯಗಳು ರಾಜ್ಯವನ್ನೇ ಬೆಚ್ಚಿ ಬೀಳಿಸುತ್ತಿದೆ. ಈತನಿಗೆ 1998ರ ಕೊಯಮತ್ತೂರಿನ ಬ್ಲಾಸ್ಟ್‌ ರೂವಾರಿ ಬಾಷಾ ಸಂಬಂಧಿ, ಮಹಮ್ಮದ್‌ ತಲ್ಕ ನಂಟಿರುವ ಶಂಕೆ ವ್ಯಕ್ತವಾಗ್ತಿದೆ. ಇದರ ಜೊತೆಗೆ ತಮಿಳುನಾಡಿನ ಹಿಂದೂ ಮುಖಂಡನ ಹತ್ಯೆಯಲ್ಲಿಯೂ ಕೂಡ ಭಾಗಿಯಾಗಿದ್ದ, ಮೋಸ್ಟ್‌ ವಾಂಟೆಡ್‌ ಮತೀನ್‌ ಜೊತೆ ಸಂಪರ್ಕದಲ್ಲಿರುವುದಾಗಿಯೂ ಅನುಮಾನ ವ್ಯಕ್ತವಾಗ್ತಿದೆ. ಮಂಗಳೂರಿನ ಬಾಂಬ್ ಬ್ಲಾಸ್ಟ್ ಪ್ರಕರಣ ಬಗೆದಷ್ಟು ಒಂದೊಂದೇ ಸ್ಪೋಟಕ ಸತ್ಯ ಬಯಲಾಗ್ತಿದೆ.

Exit mobile version