Site icon PowerTV

SDPI ಒಂದು ದೇಶದ್ರೋಹಿ ಸಂಘಟನೆ : ‌ಪ್ರಮೋದ್ ಮುತಾಲಿಕ್‌

ರಾಮನಗರ : ನಿಮ್ಮ ಅಧಿಕಾರದ ದಾಹಕ್ಕೆ ಭಯೋತ್ಪಾದನೆಗೆ ಬೆಂಬಲ ಕೋಡಬೇಡಿ ಎಂದು ಶ್ರೀ ರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ‌ಪ್ರಮೋದ್ ಮುತಾಲಿಕ್‌ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚಿಗೆ ಮಂಗಳೂರು ನಗರದಲ್ಲಿ‌ ಒಂದು ಬಾಂಬ್ ಬ್ಲಾಸ್ಟ್ ಪ್ರಕರಣ ನಡೆಯಿತು. ಬಹಳ ದೊಡ್ಡ ಮಟ್ಟದಲ್ಲಿ ವಿಸ್ತಾರಗೊಂಡಿದೆ. ಬೇರೆ ಬೇರೆ ರಾಜ್ಯಗಳಿಗೂ ಇದರ ಲಿಂಕ್ ಇರೋದು ಗೊತ್ತಾಗಿದೆ. ಪ್ರತಿ ಸಲ ಘಟನೆ ಆದ ನಂತರ ಜಾಗ್ರತೆ ಆಗ್ತಾರೆ, ಹೇಳಿಕೆ‌ ನೀಡ್ತಾರೆ. ಇಸ್ಲಾಮಿಕ್, ಭಯೋತ್ಪಾದನೆ ಕೆಲಸಗಳು‌ ನಡೆಯುತ್ತಿವೆ ಎಂದರು.

ಇನ್ನು, ಸರ್ಕಾರ ಕೇವಲ ಅಧಿಕಾರ, ಚುನಾವಣೆ ಅಂದುಕೊಂಡ್ರೆ ಆಗೊಲ್ಲ. ವಿರೋಧ ಪಕ್ಷದಲ್ಲೂ ಭಯೋತ್ಪಾದಕರು ಇದ್ದಾರೆ. ರಾಮನಗರದಲ್ಲೂ ಕೂಡ ಎಷ್ಟು ಜನರು ಸಿಕ್ಕಿಹಾಕಿಕೊಂಡಿದ್ದಾರೆ. ನಿಮ್ಮ ನಿಮ್ಮ ಅಧಿಕಾರದ ದಾಳಕ್ಕೆ ಉಪಯೋಗಿಸಿಕೊಳ್ಳಬೇಡಿ. ನಿಮ್ಮ ಅಧಿಕಾರದ ದಾಹಕ್ಕೆ ಭಯೋತ್ಪಾದನೆಗೆ ಬೆಂಬಲ ಕೋಡಬೇಡಿ. ಎಲ್ಲಿ ಮುಸ್ಲೀಂ‌ ಮತಗಳು ನಿಮ್ಮ ಕೈಹಿಡಿಯೊಲ್ಲ ಎಂದು ಅವರಿಗೆ ಬೆಂಬಲ ಕೊಡೋದು ಬಿಡಬೇಕು ಎಂದು ಹೇಳಿದರು.

ಅದಲ್ಲದೇ, ಸರ್ಕಾರ ಕಠಿಣ ಕ್ರಮ ಕೈಗೊಳ್ಳದಿದ್ದರೆ ನಾವು ನಿರಂತರವಾಗಿ ಹೋರಾಟ ಮಾಡ್ತಾನೆ ಇರುತ್ತಾನೆ. SDPI ಹಾಗೂ PFI ಬ್ಯಾನ್ ಮಾಡಿ ಎಂದು ಹೋರಾಟ ಮಾಡಿದ್ದೇವೆ. ಇದೀಗ PFI ನಿಷೇಧ ಮಾಡಿದ್ದಾರೆ. ಕಳೆದ ಸಾಕಷ್ಟು ಪ್ರಕರಣದಲ್ಲಿ ಎಸ್ ಡಿಪಿಐ ನ ಸಂಘಟನೆಯವರು ಭಾಗಿಯಾಗಿದ್ದಾರೆ. SDPI ಬ್ಯಾನ್ ಮಾಡದೇ ಇರೋದು ಬಿಜೆಪಿಯ ಲಾಭಕ್ಕೆ ಇಟ್ಟುಕೊಂಡಿದೆ. ಮುಸ್ಲಿಂ ಮತಗಳೇ ಕಾಂಗ್ರೆಸ್ ಪಕ್ಷಕ್ಕೆ ಆಧಾರ ಸ್ತಂಭ PFI ಒಂದು ದೇಶದ್ರೋಹಿ ಸಂಘಟನೆ ಇದೊಂದು ಕ್ಯಾನ್ಸರ್ ರೀತಿ ಇದ್ದ ಹಾಗೆ ಎಂದರು.

Exit mobile version