Site icon PowerTV

‘ಬಾಡಿಗೆಗೆ ಮನೆ ಕೊಡುವ ಮುನ್ನ ಎಚ್ಚರ’

ಮಂಗಳೂರು :  ಕುಕ್ಕರ್​​ ಬಾಂಬ್​​ ಪ್ರಕರಣ ಜನರ ಬೆಚ್ಚಿ ಬೀಳಿಸಿದೆ. ಉಗ್ರ ಶಾರೀಕ್​​​ ಮಂಗಳೂರಿನಲ್ಲಿ ನರಮೇಧ ನಡೆಸಲು ಪ್ಲ್ಯಾನ್​​​ ಮಾಡಿಕೊಂಡಿದ್ದ.

ಈತ ಹಿಂದೂ ಹೆಸರಿನಲ್ಲಿ ನಕಲಿ ದಾಖಲೆ ನೀಡಿ ಮನೆಯನ್ನು ಬಾಡಿಗೆಗೆ ಪಡೆದಿದ್ದ. ಹಿಂದೂ ಹೆಸರಿನಲ್ಲಿ ಈತ ಸ್ಫೋಟ ನಡೆಸಲು ತಯಾರಿ ನಡೆಸಿದ್ದನು. ಈ ಆಟೋ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ADGP ಆಲೋಕ್ ಕುಮಾರ್ ಟ್ವೀಟ್ ಮಾಡಿದ್ದಾರೆ.

ಮಂಗಳೂರು ಸ್ಪೋಟದಿಂದ ಕೆಲವು ವಿಚಾರಗಳನ್ನು ಕಲಿಯಬೇಕಾಗಿದೆ. ಅಪರಿಚಿತರಿಗೆ ಬಾಡಿಗೆ ಕೊಡುವ ಮುನ್ನ ಪರಿಶೀಲಿನೆಯನ್ನು ಮಾಡಿ ಮನೆ ನೀಡಿ. ಹಾಗೇ ತಮ್ಮ ಗುರುತಿನ ಚೀಟಿಯ ಬಗ್ಗೆ ಅರಿವು ಇಟ್ಟುಕೊಳ್ಳಬೇಕು. ಆಧಾರ್ ಕಾರ್ಡ್​ ಕಳೆದು ಹೋದರೆ ಹತ್ತಿರದ ಪೊಲೀಸ್ ಸ್ಟೇಷನ್​​​ಗೆ ದೂರು ದಾಖಲು ಮಾಡಿ ಕಾನೂನು ಮತ್ತು ಸುವ್ಯವಸ್ಥೆಯ ಕಾಪಾಡಿ ಎಂದು ತಿಳಿಸಿದರು.

Exit mobile version