Site icon PowerTV

6ನೇ ದಿನಕ್ಕೆ ಕಾಲಿಟ್ಟ ಜೆಡಿಎಸ್ ಪಂಚರತ್ನ ರಥಯಾತ್ರೆ

ಕೋಲಾರ : ಜೆಡಿಎಸ್‌ ಪಂಚರತ್ನ ರಥಯಾತ್ರೆಗೆ ಭರ್ಜರಿ ರೆಸ್ಪಾನ್ಸ್‌ ಸಿಕ್ಕಿದ್ದು, ಇಂದು ಹೆಚ್‌ಡಿಕೆ ನೇತೃತ್ವದ ಯಾತ್ರೆ ಚಿಕ್ಕಬಳ್ಳಾಪುರ ಜಿಲ್ಲೆ ಪ್ರವೇಶಿಸಲಿದ್ದಾರೆ.

ಚಿಂತಾಮಣಿ ವಿಧಾನಸಭಾ ಕ್ಷೇತ್ರದಿಂದ ಯಾತ್ರೆ ಆರಂಭಗೊಳ್ಳಲಿದ್ದು, ಬೆಳಗ್ಗೆ 9ಕ್ಕೆ ಕೈವಾರ ಯೋಗಿ ನಾರಾಯಣ ತಾತಯ್ಯ ದರ್ಶನ ಮಾಡಲಿದ್ದಾರೆ. ಮಧ್ಯಾಹ್ನ 12.10ಕ್ಕೆ ಚಿಂತಾಮಣಿ ಪಟ್ಟಣದಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ.

ಇನ್ನು, ಮಧ್ಯಾಹ್ನ 3.40ಕ್ಕೆ ಮುರುಗಮಲ್ಲದಲ್ಲಿ ಸಾರ್ವಜನಿಕ ಸಭೆ ನಡೆಯಲಿದ್ದು, ಮಾರ್ಗ ಮಧ್ಯೆ ಕಾರ್ಯಕರ್ತರನ್ನು ಉದ್ದೇಶಿ ಹೆಚ್‌ಡಿಕೆ ಮಾತನಾಡಲಿದ್ದಾರೆ. ಹಾಗೆನೇ ರಾತ್ರಿ ಮುನಗನಹಳ್ಳಿಯಲ್ಲಿರುವ ಜೆ.ಕೆ.ಭವನದಲ್ಲಿ ಗ್ರಾಮವಾಸ್ತವ್ಯ ಹೂಡಲಿದ್ದಾರೆ.

Exit mobile version