Site icon PowerTV

ಮಗಳಿಂದ ತಂದೆಯ ಅಂತ್ಯಸಂಸ್ಕಾರ

ಕಾರವಾರ : ಸಂಪ್ರದಾಯದ ಕಟ್ಟುಪಾಡನ್ನು ಮುರಿದು ಆತ್ಮಹತ್ಯೆ ಮಾಡಿಕೊಂಡಿದ್ದ ತಂದೆಯ ಅಂತ್ಯಸಂಸ್ಕಾರವನ್ನು ಮಗಳು ನೆರವೇರಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ‌ ತಾಲೂಕಿನ ಹಡೀಲು ಸಬ್ಬತ್ತಿಯಲ್ಲಿ ನಡೆದಿದೆ.

ಮಂಜುನಾಥ ನಾಗಪ್ಪ ನಾಯ್ಕ್ (51) ಎಂಬವವರು ತಮ್ಮ ಮನೆಯ ಗೃಹಪ್ರವೇಶ ನೆರವೇರಿಸಿ ಬಳಿಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಇವರಿಗೆ ಮೂರು ಜನ ಹೆಣ್ಣುಮಕ್ಕಳಿದ್ದು ಗಂಡುಮಕ್ಕಳಿರಲಿಲ್ಲ. ಹೀಗಾಗಿ ರಕ್ತಸಂಬಂಧಿಗಳಲ್ಲಿ ಯಾರಾದರೂ ಚಿತೆಗೆ ಅಗ್ನಿಸ್ಪರ್ಷ ಮಾಡಬೇಕಿತ್ತು.

ಆದ್ರೆ ಸಂಪ್ರದಾಯಕ್ಕೆ ಕಟ್ಟುಬೀಳದೇ ಹಿರಿಯ ಮಗಳು ಶ್ವೇತಾ ನಾಗಪ್ಪ ನಾಯ್ಕ ಅಂತ್ಯಸಂಸ್ಕಾರ ನೆರವೇರಿಸುವ ಮೂಲಕ ಗಂಡಿನಷ್ಟೇ ತಾವೂ ಸಮರ್ಥರು ಎಂಬುದನ್ನು ತೋರಿಸಿಕೊಟ್ಟು ಸಮಾಜದ ಮಹಿಳೆಯರಿಗೆ ಮಾದರಿಯಾದರು.

Exit mobile version