ಮಂಗಳೂರು : ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಮೊದಲ ಬಾರಿಗೆ ಮಂಗಳೂರಿಗೆ ಆಗಮಿಸಿದ್ದಾರೆ.
ಬಾಂಬ್ ಸ್ಫೋಟವಾದ ಸ್ಥಳ ಪರಿಶೀಲನೆ ನಡೆಸಿ, ADGP ಅಲೋಕ್ ಕುಮಾರ್‌ರಿಂದ ಮಾಹಿತಿಯನ್ನು ಪಡೆದರು. ನಂತರ DG-IGP ಪ್ರವೀಣ್ ಸೂದ್, ADGP ಅಲೋಕ್ ಕುಮಾರ್, ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ.
ಆಟೋ ಚಾಲಕ ಪುರುಷೋತ್ತಮ್ ಭೇಟಿ ಮಾಡಿ ಆರೋಗ್ಯವನ್ನು ವಿಚಾರಿಸಿದ್ದಾರೆ. ಉಗ್ರ ಶಾರೀಕ್ ಉಗ್ರ ಕೃತ್ಯದ ಕುರಿತು ತನಿಖೆ ನಡೆಸುತ್ತಿದ್ದು, ತನಿಖೆ ಬಳಿಕ ಆತನ ಮುಖವಾಡ ಮತ್ತಷ್ಟು ಬಯಲಾಗಲಿದೆ.



