Site icon PowerTV

ನವವೃಂದಾವನ ನಡುಗಡ್ಡೆಯಲ್ಲಿ ಆರಾಧನೆ

ಕೊಪ್ಪಳ : ಹಂಪಿ ಸಮೀಪದ ಆನೆಗೊಂದಿಯಲ್ಲಿ ತುಂಗಭದ್ರಾ ನದಿ ಮಧ್ಯದ ಸುಂದರ ದ್ವೀಪದಲ್ಲಿರುವ ನವವೃಂದಾವನ ನಡುಗಡ್ಡೆಯಲ್ಲಿ ಆಚಾರ್ಯ ಮಧ್ವರ ನೇರ ಶಿಷ್ಯರಾದ ಪದ್ಮನಾಭ ತೀರ್ಥರ ಮಧ್ಯಾರಾಧನೆ ನಡೆದಿದೆ. ಉತ್ತರಾಧಿಮಠ, ಹಾಗೂ ರಾಯರ ಮಠದ ನಡುವೆ ಹಲವು ವರ್ಷಗಳಿಂದ ಪೂಜೆ ವಿವಾದಿತ ಕೇಂದ್ರ ಎಂದು ಈ ಸ್ಥಳ ಹೆಸರು ಪಡೆದುಕೊಂಡಿದೆ. ಪದ್ಮನಾಭ ತೀರ್ಥರ ಆರಾಧನೆಗಾಗಿ ಎರಡು ಮಠದ ವ್ಯಾಜ್ಯ ಹಲವಾರು ವರ್ಷಗಳಿಂದ ಕೋರ್ಟ್ ನಲ್ಲಿ ನಡೆಯ್ತುದೆ. ಆದ್ರೆ ಈ ಬಾರಿ ಹೈಕೋರ್ಟ್ ಎರಡೂ ಮಠಕ್ಕೆ ಒಂದುವರೆ ದಿನ. ಒಂದುವರೆ ದಿನ ಪೂಜೆ ಮಾಡುವಂತೆ ಆದೇಶ ನೀಡಿದ ಹಿನ್ನೆಲೆಯಲ್ಲಿ ನವವೃಂದಾವನದಲ್ಲಿ ಯಾವುದೇ ಗಲಾಟೆ ಇಲ್ಲದೆ ಆರಾಧನೆ ನೆರವೇರಿದೆ.

ಸೋಮವಾರದಿಂದ ರಾಯರ ಮಠದ ಪೀಠಾಧಿಪತಿಗಳು ನೇತೃತ್ವದಲ್ಲಿ ಪದ್ಮನಾಭ ತೀರ್ಥರ ಆರಾಧನೆ ಹಮ್ಮಿಕೊಳ್ಳಾಲಗಿದೆ. ಇಂದು ರಾಯರ ಮಠದ ಸುಭುದೇಂದ್ರ ಶ್ರೀಗಳು ಅಪಾರ ಭಕ್ತರೊಂದಿಗೆ ಪದ್ಮನಾಭ ತೀರ್ಥರ ಮಧ್ಯಾರಾಧನೆ ನೆರವೇರಿಸಿದ್ರು.

ಒಟ್ಟಾರೆ ವಿವಾದಿತ ನವವೃಂದಾವನದ ಪದ್ಮನಾಭ ತೀರ್ಥರ ಆರಾಧನೆ ಶಾಂತಿಯುತವಾಗಿ ನೆರವೇರಿದೆ. ಆದಷ್ಟು ಬೇಗ ಎರಡೂ ಮಠಗಳ ಭಕ್ತರು ಸೇರಿ ಆರಾಧನೆ ಮಾಡಲಿ ಎನ್ನುವುದು ಭಕ್ತರ ಅಭಿಪ್ರಾಯ.

ಶುಕ್ರಾಜ್ ಕುಮಾರ್ ಪವರ್ ಟಿವಿ ಕೊಪ್ಪಳ

Exit mobile version