Site icon PowerTV

ಮಂಡ್ಯದಲ್ಲಿ ಲವ್ ಜಿಹಾದ್ ಪ್ರಕರಣ ಬೆಳಕಿಗೆ : ವಿಡಿಯೋ ಮಾಡಿ ಮತಾಂತರಕ್ಕೆ ಬೆದರಿಕೆ

ಮಂಡ್ಯ: ಲವ್ ಜಿಹಾದ್ ಪ್ರಕರಣ ಬೆಳಕಿಗೆ ಬಂದಿದೆ. ಹಿಂದೂ ಹುಡುಗಿಯನ್ನು ಲವ್ ಜಿಹಾದ್‌ ಕೂಪಕ್ಕೆ ಕೆಡವಿ, ಅತ್ಯಾಚಾರವೆಸಗಿ ಮದುವೆಯಾಗಲು ಇಸ್ಲಾಂಗೆ ಮತಾಂತರವಾಗುವಂತೆ ಒತ್ತಾಯ ಮಾಡುತ್ತಿದ್ದ ಕಾಮಕ್ರಿಮಿ ಯೂಸುಫ್ ಪಾಷ ಕೊನೆಗೂ ಖಾಕಿ ಬಲೆಗೆ ಬಿದ್ದಿದ್ದಾನೆ. ಇವನ ಬಲೆಗೆ ಬಿದ್ದ ಬಾಲಕಿಯರು ಮತಾಂತರಕ್ಕೆ ಒಪ್ಪದಿದ್ದರೆ ಅವರಿಗೆ ಬ್ಲ್ಯಾಕ್‌ಮೇಲ್ ಮಾಡ್ತಾ ಇದ್ದನಂತೆ.

13 ವರ್ಷದ ಅಪ್ರಾಪ್ತೆಯನ್ನು ಟ್ರ್ಯಾಪ್ ಮಾಡಿದ್ದ ಯೂಸುಫ್‌ ಪಾಷ, ವಿಡಿಯೋ ಕಾಲ್ ಮಾಡ್ತಾಯಿದ್ದ.. ಆಗ ಸ್ಕ್ರೀನ್ ರೆಕಾರ್ಡ್ ಮಾಡ್ಕೊಂಡು ಖಾಸಗಿ ಅಂಗ ತೋರಿಸುವಂತೆ ಬ್ಲ್ಯಾಕ್‌ಮೇಲ್ ಮಾಡ್ತಾಯಿದ್ದ. ಇದಕ್ಕೆ ಹೆದರಿದ ಆಕೆ ಹಾಗೆ ಮಾಡಿದಾಗ ವಿಡಿಯೋ ರೆಕಾರ್ಡ್ ಮಾಡಿಕೊಂಡು ಬೆದರಿಸಿ, ಮನೆಗೆ ಬಂದು ಬಾಲಕಿಗೆ ನಿದ್ದೆ ಮಾತ್ರೆ ತಂದು ಕೊಟ್ಟು ತನ್ನ ಮನೆಯವರಿಗೆ ಊಟದಲ್ಲಿ ಬೆರೆಸಿ ಕೊಡುವಂತೆ ಸೂಚಿಸಿದ್ದ. ಅದರಂತೆ ಬಾಲಕಿ ಮಾಡಿದಾಗ ಮನೆ ಮಂದಿಯೆಲ್ಲಾ ಮತ್ತು ಬೆರೆಸಿದ್ದ ಊಟ ಸೇವಿಸಿ ನಿದ್ದೆಗೆ ಜಾರಿದ್ದರು. ಇದನ್ನೇ ಅವಕಾಶವಾಗಿ ಬಳಸಿಕೊಂಡ ಕಾಮುಕ, ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದ. ಮದುವೆಯಾಗಬೇಕಾದರೆ ಇಸ್ಲಾಂಗೆ ಮತಾಂತರ ಆಗುವಂತೆ ಬಾಲಕಿಗೆ ಷರತ್ತು ವಿಧಿಸಿದ್ದ.

ನಾಗಮಂಗಲ ಟೌನ್ ಠಾಣಾ ವ್ಯಾಪ್ತಿಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಕಾಮಾಂಧ ಯೂಸುಫ್ ಪಾಷಾನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.

ಬಾಲಕೃಷ್ಣ ಜೀಗುಂಡಿಪಟ್ಟಣ, ಪವರ್ ಟಿವಿ, ಮಂಡ್ಯ

Exit mobile version