Site icon PowerTV

ಸೌದಿ ಎದುರು ತಲೆ ಬಾಗಿದ ಅರ್ಜೆಂಟೀನಾ

ಫಿಫಾ ವಿಶ್ವಕಪ್​ನಲ್ಲಿ ಇಂದು ನಡೆದ ಮೊದಲ ಪಂದ್ಯದಲ್ಲಿ ಅಚ್ಚರಿ ಫಲಿತಾಂಶ ಹೊರಬಿದ್ದಿದೆ. ಸ್ಟಾರ್ ಆಟಗಾರ ಲಿಯೋನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡವು ಸೌದಿ ಅರೇಬಿಯಾ ವಿರುದ್ಧದ ಗ್ರೂಪ್-ಸಿ ಪಂದ್ಯದಲ್ಲಿ 2-1 ಗೋಲುಗಳ ಅಂತರದಿಂದ ಸೋಲನುಭವಿಸಿದೆ.

ಮೆಸ್ಸಿ ಅವರ ಖಾತೆಯಲ್ಲಿ ಇನ್ನೂ ಒಂದೇ ಒಂದು ವಿಶ್ವಕಪ್ ಇಲ್ಲ. ಹೀಗಾಗಿ ಈ ಬಾರಿಯ ವಿಶ್ವಕಪ್​ನಲ್ಲಿ ಈ ಬರವನ್ನು ಕೊನೆಗೊಳಿಸುವ ಸಲುವಾಗಿ ಅರ್ಜೆಂಟೀನಾ ತಂಡ ಮೈದಾನಕ್ಕಿಳಿದಿದೆ. ಆದರೆ ವಿಶ್ವಕಪ್‌ನಲ್ಲಿ ಆಡಿದ ಮೊದಲ ಪಂದ್ಯದಲ್ಲಿಯೇ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡಕ್ಕೆ ಸೋಲಿನ ಶಾಕ್ ಎದುರಾಗಿದೆ.ಸೌದಿ ಅರೇಬಿಯಾ ಅರ್ಜೆಂಟೀನಾದ 36 ಪಂದ್ಯಗಳ ಅಜೇಯ ಸರಣಿಯನ್ನು ಮುರಿದು ಚೊಚ್ಚಲ ಬಾರಿಗೆ ವಿಶ್ವಕಪ್‌ನಲ್ಲಿ ತನ್ನ ಮೊದಲ ಪಂದ್ಯವನ್ನು ಗೆದ್ದಿದೆ.

Exit mobile version