Site icon PowerTV

4ನೇ ದಿನಕ್ಕೆ ಕಾಲಿಟ್ಟ ಪಂಚರತ್ನ ಯಾತ್ರೆ

ಕೋಲಾರ : ಚಿನ್ನದ ನಾಡು ಕೋಲಾರದಲ್ಲಿ 4ನೇ ದಿನದ ಪಂಚರತ್ನ ಯಾತ್ರೆಗೆ ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ.

ನೂರಾರು ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗಿಯಾಗಿ ಜಯಘೋಷವನ್ನು ಕೂಗುತ್ತಾ HD ಕುಮಾರಸ್ವಾವಿಯವರಿಗೆ ಅದ್ದೂರಿಯಾಗಿ ಸ್ವಾಗತವನ್ನು ಕೋರಿದ್ದಾರೆ. ಇನ್ನೂ ನಿನ್ನೆಯೂ ಕೂಡ ಕೋಲಾರ ಜನತೆ ಹೂಮಳೆ ಸುರಿಸುತ್ತಾ ಬೀದಿ ಬೀದಿಗಳಲ್ಲಿ ತೆನೆ ಬಳಗದ ರಥಯಾತ್ರೆಗೆ ಸ್ವಾಗತ ಕೋರಿದ್ರು. 35ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಜೆಡಿಎಸ್ ರೋಡ್ ಶೋ ನಡೆಸಲಿದೆ.

ಜಿಲ್ಲೆಯಲ್ಲಿ ಜೆಡಿಎಸ್​ಗೆ ಉತ್ತಮ ಸ್ಪಂದನೆ ಸಿಕ್ಕಿದ್ದು, ಮುಂದಿನ ದಿನಗಳಲ್ಲಿ ಪಕ್ಷ ಅಧಿಕಾರಕ್ಕೆ ಬಂದ್ರೆ ಪಂಚರತ್ನ ಯೋಜನೆಯ ಅಂಶಗಳನ್ನು ಜಾರಿಗೊಳಿಸೋದಾಗಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

Exit mobile version