Site icon PowerTV

ಈ ಬಾರಿ ಬಹುಮತದಿಂದ ಜೆಡಿಎಸ್ ಗೆಲ್ಲುತ್ತೆ : ನಿಖಿಲ್ ಕುಮಾರಸ್ವಾಮಿ

ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಪರ್ಸನಲ್ ಡೇಟಾ ಕಲೆ ಹಾಕಿದ ಆರೋಪದ ವಿಚಾರವಾಗಿ ಜೆಡಿಎಸ್​ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.

ಖಾಸಗಿ ಸಂಸ್ಥೆ ಸರ್ಕಾರಿ ನೌಕರರ ರೀತಿ ಡಾಟಾ ಬೇಸ್ ಕಲೆಕ್ಟ್ ಮಾಡುವುದು ಸರಿಯಲ್ಲ. ಸರ್ಕಾರ ಪಾರದರ್ಶಕ, ನ್ಯಾಯಯುತವಾದ ತನಿಖೆಯನ್ನ ನಡೆಸಬೇಕು. ನಿಜಕ್ಕೂ ಏನು ನಡೆದಿದೆ ಎಂಬುದರ ಕುರಿತು ಸತ್ಯಾಸತ್ಯತೆಯನ್ನು ಪರಿಶೀಲನೆ ಮಾಡಿ ಎಂದು ಒತ್ತಾಯಿಸಿದ್ದಾರೆ. ಇದರ ಜೊತೆಗೆ ಮತ್ತೊಮ್ಮೆ ಕಾಂಗ್ರೆಸ್-ಬಿಜೆಪಿ ಜೊತೆ ಸರ್ಕಾರ ಮಾಡಲ್ಲ.

ಇನ್ನು, ರಾಜ್ಯಾದ್ಯಂತ 123 ಮಿಷನ್ ಹಿಡಿದುಕೊಂಡು ಹೊರಟಿದ್ದೇವೆ‌. ಎಲ್ಲಾ ಜಿಲ್ಲೆಯಲ್ಲಿ ಹೆಚ್ಚಿನ ಹೋರಾಟವನ್ನು ಮುಂದುವರಿಸಿದ್ದೇವೆ. ಮತ್ತೊಮ್ಮೆ ಕಾಂಗ್ರೆಸ್-ಬಿಜೆಪಿ ಜೊತೆ ಸರ್ಕಾರ ಮಾಡಲ್ಲ. ‘ಈ ಬಾರಿ ಬಹುಮತದಿಂದ ಜೆಡಿಎಸ್ ಗೆದ್ದೆ ಗೆಲ್ಲುತ್ತೆ’ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

Exit mobile version