Site icon PowerTV

ಉಗ್ರ ಚಟುವಟಿಕೆ ನಡೆಸುವವರಿಗೆ ಗುಂಡು ಹೊಡೆಯಬೇಕು : ಕೆ.ಎಸ್. ಈಶ್ವರಪ್ಪ

ಶಿವಮೊಗ್ಗ : ಉಗ್ರ ಚಟುವಟಿಕೆ ನಡೆಸುವವರಿಗೆ ಗುಂಡು ಹೊಡೆಯಬೇಕು ಅಥವಾ ನೇಣುಗಂಬಕ್ಕೆ ಏರಿಸಬೇಕು ಎಂದು ಶಿವಮೊಗ್ಗದಲ್ಲಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೆ ಬಾಂಬ್ ಬ್ಲ್ಯಾಸ್ಟ್ ಎಂಬುದು ಮಾಮೂಲಿಯಾಗಿ ಹೋಗಿತ್ತು. ಇವರಿಗೆ ಎಲ್ಲೂ ಏನೂ ಭಯವಿಲ್ಲದಂತಾಗಿದೆ. ಮಗ, ಮಗಳು, ದೇಶದ್ರೋಹಿ ಸಂಘಟನೆಗಳ ಜೊತೆಗೆ ಸಂಪರ್ಕ ಹೊಂದಿರುವುದು ಕೂಡ ಮಾಮೂಲಿಯಾಗಿದೆ. ಅವರವರ ತಂದೆ, ತಾಯಿಗಳು ಇವರಿಗೆಲ್ಲಾ ಬಿಗಿ ಮಾಡಬೇಕು. ಸಮಾಜ ಕೂಡ ಈ ಬಗ್ಗೆ ಗಮನಿಸಬೇಕು ಎಂದರು.

ಇನ್ನು, ರಾಷ್ಟ್ರದ್ರೋಹಿಗಳ ಬಗ್ಗೆ ಬಿಗಿ ಕ್ರಮ ತೆಗೆದುಕೊಳ್ಳುತ್ತೆವೆಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮುಖ್ಯಸ್ಥರು ಹೇಳುತ್ತಿರುತ್ತಾರೆ. ಏನು ಬಿಗಿ ಕ್ರಮ ತೆಗೆದುಕೊಂಡಿದ್ದಿರಾ ಎಂದು ನೊಂದವರು ಪ್ರಶ್ನೆ ಮಾಡುತ್ತಾರೆ. ನಾನು ನರೇಂದ್ರ ಮೋದಿ ಮತ್ತು ಅಮಿತ್ ಷಾ ಅವರಿಗೆ ನಾನು ಪ್ರಾರ್ಥನೆ ಮಾಡುತ್ತೇನೆ. ಸೈನಿಕರ ಮೇಲೆ ದಾಳಿ ಮಾಡಿದಾಗ ಯಾವ ರೀತಿ ಕ್ರಮ ತೆಗೆದುಕೊಳ್ಳುತ್ತಾರೋ ಹಾಗೆ, ಇವರ ಮೇಲೆಯೂ ಬಿಗಿ ಕ್ರಮ ತೆಗೆದುಕೊಳ್ಳಬೇಕು. ಉಗ್ರ ಚಟುವಟಿಕೆ ನಡೆಸುವವರಿಗೆ ಗುಂಡು ಅಥವಾ ನೇಣುಗಂಬಕ್ಕೆ ಏರಿಸಬೇಕು ಎಂದು ಹೇಳಿದರು.

ಶಿವಮೊಗ್ಗ ಶಾಂತಿಪ್ರಿಯ ಜಿಲ್ಲೆಯಾಗಿದೆ. ಇಲ್ಲಿ ಉಗ್ರ ಚಟುವಟಿಕೆ ನಡೆಸಿದರೆ ಅನುಮಾನ ಬರುವುದಿಲ್ಲ ಎಂದು ಇಲ್ಲಿಗೆ ಬರುತ್ತಿದ್ದಾರೆ. ಇವರಿಗೆ ಗುಂಡಿಟ್ಟು ಹೊಡೆಯುತ್ತಾರೆ, ನೇಣಿಗೆ ಹಾಕುತ್ತಾರೆ ಎಂದು ಭಯ ಹುಟ್ಟಿದರೆ, ಈ ರೀತಿಯಾಗುವುದಿಲ್ಲ. ಸರ್ಕಾರಗಳು ಈ ಬಗ್ಗೆ ಗಮನ ಹರಿಸಬೇಕು. ಸರ್ಕಾರಗಳ ಜೊತೆಗೆ ಸಮಾಜ ಕೂಡ ಜಾಗೃತವಾಗಬೇಕು ಎಂದರು.

Exit mobile version