Site icon PowerTV

ಬಡ್ಡಿ ಹಣಕ್ಕಾಗಿ ಆಟೋ ಚಾಲಕನ ಮೇಲೆ ಹಲ್ಲೆ ಮಾಡಿದ ಹೆಸ್ಕಾಂ ನೌಕರ

ಹುಬ್ಬಳ್ಳಿ: ಹೆಸ್ಕಾಂ ಸರ್ಕಾರಿ ನೌಕರನಾಗಿ ಕೆಲಸ ಮಾಡುತ್ತ ಬಡ್ಡಿ ವ್ಯವಹಾರ ಮಾಡಿಕೊಂಡಿರುವ ಮಂಜುನಾಥ್ ಬಾಗಲಕೋಟೆ ಹಾಗೂ ಆನಂದ ಬಾಗಲಕೋಟೆ ಎನ್ನುವರು ಬಡ್ಡಿ ಹಣ ನೀಡಿಲ್ಲ ಎಂದು ಅಯೋಧ್ಯಾನಗರದ ಕ ಆನಂದ ಕದಂ ಎನ್ನುವ ಆಟೋ ಚಾಲಕನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ.

ಸದ್ಯ ಹಲ್ಲೆಗೊಳಗಾದ ಆನಂದ ಕದಂ ವಿದ್ಯಾನಗನರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವಂತೆ ಮನವಿ ನೀಡಿದ್ದು ಪೊಲೀಸರು ಕೂಲಂಕಷವಾಗಿ ವಿಚಾರಣೆಯನ್ನು ನಡೆಸುತ್ತಿದ್ದಾರೆ.

ಹುಬ್ಬಳ್ಳಿಯಲ್ಲಿ ಬಡ್ಡಿ ಕುಳಗಳ ಹಾವಳಿ ಹೆಚ್ಚಾಗುತ್ತಿದ್ದು ಪೊಲೀಸರು ಕಠಿಣ ಕ್ರಮ ಕೈಗೊಳ್ಳುವ ಅವಶ್ಯಕತೆ ಇದೆ ಇಲ್ಲವಾದಲ್ಲಿ ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕುವುದು ಅಸಾಧ್ಯ ಎಂದು ಹೇಳಬಹುದು.

Exit mobile version