Site icon PowerTV

ಅದಿತಿ ಜೊತೆ ಪಾರು ಧಾರಾವಾಹಿಯ ಪ್ರೀತು ನಿಶ್ಚಿತಾರ್ಥ

ಪಾರು ಸೀರಿಯಲ್‌ನಲ್ಲಿ ನಟಿಸುತ್ತಿದ್ದ ಸಿದ್ದು ಮೂಲಿಮನಿ ಮತ್ತು ಗಟ್ಟಿಮೇಳ ಧಾರಾವಾಹಿಯಲ್ಲಿ ನಟಿಸುತ್ತಿದ್ದ ಪ್ರಿಯಾ ಆಚಾರ್‌ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಸಿದ್ದು ಮೂಲತಃ ಉತ್ತರ ಕರ್ನಾಟಕದ ಹುಡುಗ, ಪ್ರಿಯಾ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಪ್ರಿಯಾ ಆಚಾರ್‌ ಜೀ ಕನ್ನಡದ ಗಟ್ಟಿಮೇಳ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಇವರ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಗಟ್ಟಿಮೇಳ ಧಾರಾವಾಹಿಯ ನಟಿಯರು ಭಾಗಿಯಾಗಿದ್ದಾರೆ.

ಪ್ರಿಯಾ ಆಚಾರ್‌ ಮತ್ತು ಸಿದ್ದು ಜೋಡಿ ಡಾನ್ಸಿಂಗ್‌ ಶೋನಲ್ಲಿ ಭಾಗವಹಿಸಿದ್ದರು, ಈ ಶೋನಿಂದಲ್ಲೇ ಇಬ್ಬರ ನಡುವೆ ಪ್ರೀತಿ ಹುಟ್ಟಿದೆ.ಇವರ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಕಿರುತೆರೆ ಸ್ನೇಹಿತರು ಭಾಗವಹಿಸಿದ್ದರು. ಸ್ನೇಹಿತರು ಕೂಡ ಇವರ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಹಾರೈಸಿದ್ದಾರೆ.

Exit mobile version