Site icon PowerTV

ಎರಡನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾಗೆ ಭರ್ಜರಿ ಗೆಲುವು

ಮೌಂಟ್ ಮೌಂಗನು ಬೇ ಓವಲ್ ಮೈದಾನದಲ್ಲಿ ನಡೆದ ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಎರಡನೇ ಟಿ20 ಪಂದ್ಯದಲ್ಲಿ ಯುವ ಟೀಂ ಇಂಡಿಯಾ ಕೇನ್ ಪಡೆಯನ್ನು ಬಗ್ಗುಬಡಿಯುವಲ್ಲಿ ಯಶಸ್ವಿಯಾಗಿದೆ.

10 ದಿನಗಳ ಟಿ20 ವಿಶ್ವಕಪ್ ನಿರಾಸೆಯ ನಂತರ, ಅಂತಿಮವಾಗಿ ಭಾರತ ತಂಡ ಮತ್ತೆ ಮೈದಾನಕ್ಕೆ ಬಂದು ಅಮೋಘ ಗೆಲುವಿನೊಂದಿಗೆ ಹೊಸ ಯುಗವನ್ನು ಪ್ರಾರಂಭಿಸಿದೆ. ಹಂಗಾಮಿ ನಾಯಕ ಹಾರ್ದಿಕ್ ಪಾಂಡ್ಯ ನೇತೃತ್ವದ ಭಾರತ ತಂಡ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು 65 ರನ್‌ಗಳ ಬೃಹತ್ ಅಂತರದಿಂದ ಸೋಲಿಸಿತು.

ಇನ್ನು, ಸೂರ್ಯಕುಮಾರ್ ಯಾದವ್ ಅಕ್ಷರಶಃ ಅಬ್ಬರಿಸಿದ್ದಾರೆ. ಸ್ಫೋಟಕ ಬ್ಯಾಟಿಂಗ್ ಅಬ್ಬರಕ್ಕೆ ನ್ಯೂಜಿಲ್ಯಾಂಡ್ ಬೌಲರ್‍ಗಳು ಕಂಗಾಲಾಗಿದ್ದಾರೆ. ಮೈದಾನದ ಮೂಲೆ ಮೂಲೆಗೂ ಭರ್ಜರಿ ಸಿಕ್ಸರ್ ಮತ್ತು ಬೌಂಡರಿಗಳ ಅಟ್ಟುವ ಮೂಲಕ ಸೂರ್ಯಕುಮಾರ್ ಶತಕ ಸಿಡಿಸಿ ಮಿಂಚಿದ್ದಾರೆ.

Exit mobile version