Site icon PowerTV

ಇದು ಆಕಸ್ಮಿಕವಲ್ಲ ಇದು ಭಯೋತ್ಪಾದನಾ ಕೃತ್ಯ : ಅಲೋಕ್ ಕುಮಾರ್

ಶಿವಮೊಗ್ಗ : ಆಟೋ ರಿಕ್ಷಾದಲ್ಲಿ ಸಂಭವಿಸಿದ ನಿಗೂಢ ಸ್ಪೋಟಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಇದೀಗ ಬ್ಲಾಸ್ಟ್ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ಪೊಲೀಸರು ಶಂಕಿತನ ಹೆಜ್ಜೆ ಗುರುತನ್ನು ಪತ್ತೆ ಹಚ್ಚಿದ್ದಾರೆ.

ಶಂಕಿತ ಮೈಸೂರಿನ ಲೋಕನಾಯಕ ನಗರದ 10ನೇ ಕ್ರಾಸ್‌ನಲ್ಲಿ ಸಿಂಗಲ್ ರೂಂ ಬಾಡಿಗೆ ಪಡೆದಿದ್ದ. ಮೋಹನ್ ಕುಮಾರ್ ಎಂಬುವವರ ಬಿಲ್ಡಿಂಗ್‌ನಲ್ಲಿ ರೂಂ ಪಡದಿದ್ದ ಎಂಬ ಅಂಶ ಬೆಳಕಿಗೆ ಬಂದಿದೆ. ಅಗ್ರಿಮೆಂಟ್ ಕಾಪಿಯಲ್ಲಿ ಪ್ರೇಮ್ ರಾಜ್ ಎಂದು ಹೆಸರನ್ನು ಉಲ್ಲೇಖಿಸಿದ್ದು, ಹುಬ್ಬಳ್ಳಿ ವಿಳಾಸ ನೀಡಿ ಅಗ್ರಿಮೆಂಟ್ ಮಾಡಿಕೊಂಡಿದ್ದು. ಪೊಲೀಸ್ರು ಕೊಠಡಿ ಪರೀಕ್ಷೆ ಮಾಡಿದಾಗ ಕೆಲವು ಸ್ಪೋಟಕ ವಸ್ತುಗಳು ಪತ್ತೆಯಾಗಿವೆ.

ಸರ್ಕ್ಯೂಟ್ ಬೋರ್ಡ್, ಸ್ಮಾಲ್ ಬೋಲ್ಟ್, ಬ್ಯಾಟರಿ, ಮೊಬೈಲ್, ವುಡೆನ್ ಪೌಡರ್, ಅಲುಮಿನಿಯಂ, ಮಲ್ಟಿ ಮೀಟರ್, ವೈರ‍್ಸ್, ಮಿಕ್ಸರ್ ಜಾರ‍್ಸ್, ಪ್ರೆಶರ್ ಕುಕ್ಕರ್ ಸೇರಿದಂರೆ ಹಲವು ಸ್ಪೋಟಕಗಳು ಪತ್ತೆಯಾಗಿವೆ. ಒಂದು ಮೊಬೈಲ್, ಎರಡು ನಕಲಿ ಆಧಾರ್ ಕಾರ್ಡ್, ಒಂದು ನಕಲಿ ಪ್ಯಾನ್ ಕಾರ್ಡ್​ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನು ಇದು ಆಕಸ್ಮಿಕವಲ್ಲ ಇದು ಭಯೋತ್ಪಾದನಾ ಕೃತ್ಯ ಎಂದು ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ. ಅದಲ್ಲದೆ ಉನ್ನತ ಮಟ್ಟದ ತನಿಖೆಗೆ ಸೂಚನೆ ನೀಡಿದ್ದಾರೆ. ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಎಸ್ಎಲ್ ಅಧಿಕಾರಿಗಳು ಇಂಚಿಂಚೂ ಮಾಹಿತಿ ಕಲೆಹಾಕುತ್ತಿದ್ದಾರೆ.

Exit mobile version