Site icon PowerTV

3ನೇ ದಿನಕ್ಕೆ ಕಾಲಿಟ್ಟ ಪಂಚರತ್ನ ರಥಯಾತ್ರೆ

ಕೋಲಾರ :  JDS ಪಕ್ಷದ ಪಂಚರತ್ನ ರಥಯಾತ್ರೆ 3ನೇ ದಿನಕ್ಕೆ ಕಾಲಿಟ್ಟಿದೆ. ಇಂದು ಮಾಲೂರಿನಲ್ಲಿ JDS ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ. ದಿನ್ನಹಳ್ಳಿ, ಮಾಸ್ತಿ, ಕುಡಿಯನೂರು, ಕೋಡಿಹಳ್ಳಿ‌ ಗೇಟ್​​​​​​ ಲಕ್ಕೂರುನಲ್ಲಿ‌ HDK ರಥಯಾತ್ರೆ ಸಾಗ್ತಿದೆ. ಮಾಲೂರಿನಲ್ಲಿ ಸಂಜೆ 5.45ಕ್ಕೆ ಮಾಜಿ ಸಿಎಂ H.D. ಮಾಜಿ ಸಿಎಂ ರೋಡ್ ಶೋ ನಡೆಸಲಿದ್ದಾರೆ.

ರಾತ್ರಿ‌ 7.15ಕ್ಕೆ ಶಿವಾರಪಟ್ಟಣದಲ್ಲಿ‌ ಕುಮಾರಸ್ವಾಮಿ ಗ್ರಾಮವಾಸ್ತವ್ಯ ಹೂಡ್ತಾರೆ. ಕೋಲಾರ ಜಿಲ್ಲೆಯ ಬಂಗಾರಪೇಟೆ ಕ್ಷೇತ್ರದ ಮಾಗೇರಿ ಗ್ರಾಮದಲ್ಲಿ ಮಾಜಿ ಮುಖ್ಯಮಂತ್ರಿ ತಮ್ಮ 2 ನೇ ದಿನದ ಗ್ರಾಮ ವಾಸ್ತವ್ಯವನ್ನು ಹೂಡಿದ್ದರು.

ಗ್ರಾಮದಲ್ಲಿ ಹಬ್ಬದ ವಾತಾವರಣ ಮನೆಮಾಡಿತ್ತು. ಇಡೀ ಊರಿನ ತುಂಬಾ ತಳಿರು ತೋರಣದಿಂದ ಅಲಂಕಾರ ಮಾಡಲಾಗಿತ್ತು. ಮನೆ ಮನೆಯ ಮುಂದೆಯೂ ರಂಗೋಲಿ, ಬಾಳೆ ಕಂಬಗಳಿಂದ ಅಲಂಕಾರ ಮಾಡಲಾಗಿತ್ತು. ರಾತ್ರಿ ಗ್ರಾಮ ಸಭೆ ನಡೆಸಿದ್ರು.

Exit mobile version