Site icon PowerTV

ದುಷ್ಕರ್ಮಿಗಳ ವಿರುದ್ದ ಕ್ರಮಕೈಗೊಳ್ಳಬೇಕು : ಕೆ. ಎಸ್​ ಈಶ್ವರಪ್ಪ

ಶಿವಮೊಗ್ಗ : ಮಂಗಳೂರಿನಲ್ಲಿ ಆಟೋ ಸ್ಫೋಟಗೊಂಡ ವಿಚಾರವಾಗಿ ಮಾತನಾಡಿದ ಮಾಜಿ ಸಚಿವ K.S ಈಶ್ವರಪ್ಪ, ಮಂಗಳೂರಿನಲ್ಲಿ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ NIA ಗಮನ ಹರಿಸುವುದು ಒಳ್ಳೆಯದು ಎಂದರು.

ಮಂಗಳೂರು ಅಂದ್ರೆ ಸ್ಫೋಟ ಆಗೋದು ಮಾಮುಲಿ ಎನ್ನುವಂತಾಗಿದೆ. ಸಂಬಂಧಪಟ್ಟ ಪೊಲೀಸ್ ಇಲಾಖೆ ಅಲರ್ಟ್ ಆಗಬೇಕು ಎಂದು ತಿಳಿಸಿದ್ರು. ಇದು ಯಾವ ಸಂಘಟನೆ ಮುಖಾಂತರ ಆಗಿದೆ ಎಂಬುದನ್ನು ಗಮನಿಸಬೇಕು. ಸಂಬಂಧಪಟ್ಟ ದುಷ್ಕರ್ಮಿಗಳ ವಿರುದ್ದ ತಕ್ಷಣ ಕ್ರಮ ಕೈಗೊಳ್ಳಬೇಕು. ಇದು ಭಯ ಹುಟ್ಟಿಸುವ ಕಾರ್ಯ ಹೌದೋ ಅಲ್ಲವೋ ಎಂಬುದು ಹೊರಬರಬೇಕು. ಈ ಬಗ್ಗೆ ತನಿಖೆಯಾಗಿ ಮಾಹಿತಿ ಹೊರ ಬರಲಿ ಎಂದು ಈಶ್ವರಪ್ಪ ಹೇಳಿದ್ರು.

Exit mobile version