Site icon PowerTV

ದಲಿತ ಮಹಿಳೆ ನೀರು ಕುಡಿದಿದ್ದಕ್ಕೆ ತೊಂಬೆಯಲ್ಲಿನ ನೀರು ಖಾಲಿ

ಚಾಮರಾಜನಗರ :  ಜಿಲ್ಲೆಯಲ್ಲಿ ಅಸ್ಪೃಶ್ಯತೆ ಆಚರಣೆ ಇನ್ನೂ ಜೀವಂತವಿದೆ. ದಲಿತ ಮಹಿಳೆಯೊಬ್ಬರು ನೀರು ಕುಡಿದಿದ್ದಕ್ಕೆ ತೊಂಬೆಯಲ್ಲಿನ ನೀರು ಖಾಲಿ ಮಾಡಲಾಗಿದೆ.

ಚಾಮರಾಜನಗರ ತಾಲೂಕಿನ ಹೆಗ್ಗೊಠಾರ ಗ್ರಾಮದಲ್ಲಿ ನಡೆದಿದೆ‌ ಎನ್ನಲಾದ ವಿಡಿಯೋ ಸದ್ಯ ವೈರಲ್ ಆಗಿದೆ. ಗ್ರಾಮದ ವೀರಶೈವ ಬೀದಿಯಲ್ಲಿ ತೊಂಬೆಯಲ್ಲಿನ ನೀರನ್ನು ದಲಿತ ಮಹಿಳೆ ಕುಡಿದಿದ್ದರು. ಈ ಕಾರಣಕ್ಕೆ ನೀರು ಸಂಪೂರ್ಣ ಖಾಲಿ ಮಾಡಿ ತೊಂಬೆಗೆ ಗೋಮೂತ್ರ ಸಿಂಪಡಿಸಲಾಗಿದೆ ಎಂಬ ಬರಹ ಜಾಲತಾಣದಲ್ಲಿ ವೈರಲ್ ಆಗಿದೆ.

ವಿಡಿಯೋ ಆಧಾರದ ಮೇಲೆ ತಹಶೀಲ್ದಾರ್ ಪರಿಶೀಲನೆಗೆ ಮುಂದಾಗಿದ್ದಾರೆ. ಗ್ರಾಮಕ್ಕೆ RI,VA ಕಳುಹಿಸಿ ವರದಿ ತರಿಸಿಕೊಂಡಿದ್ದಾರೆ. ಸಮಾಜ ಕಲ್ಯಾಣ ಅಧಿಕಾರಿಗಳು ಇಂದು ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ. ಅಧಿಕಾರಿಗಳ ವರದಿ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಘಟನೆ ನಿಜವಾಗಿದ್ದರೆ ತಪ್ಪಿತಸ್ಥರ ವಿರುದ್ಧ FIR ದಾಖಲಿಸಲಾಗುತ್ತೆ ಎಂದು ಟಿವಿ9ಗೆ ಚಾಮರಾಜನಗರ ತಹಶೀಲ್ದಾರ್ ಬಸವರಾಜ್ ಮಾಹಿತಿ ನೀಡಿದ್ದಾರೆ.

Exit mobile version