Site icon PowerTV

ಬೊಮ್ಮಾಯಿಗೆ ಜೋಡಿ ಗುಂಡಿಗೆ ಇದೆ : ಬಿ ಶ್ರೀರಾಮುಲು

ಬಳ್ಳಾರಿ : ನಮ್ಮ ಸರ್ಕಾರದ ನಡೆ ಸಾಮಾಜಿಕ ನ್ಯಾಯದ ಕಡೆ. ಮುಂದೆ ಲಂಕಾವನ್ನು ದಹನ ಮಾಡಬೇಕಾಗಿದೆ. ಎಸ್ ಟಿ ಸಮಾವೇಶದ ಮೂಲಕ ಕಾಂಗ್ರೆಸ್ ಪಕ್ಷ ಪತನವಾಗಲಿದೆ ಎಂದು ಸಚಿವ ಬಿ ಶ್ರೀರಾಮುಲು ಹೇಳಿದ್ದಾರೆ.

ಬಳ್ಳಾರಿಯಲ್ಲಿ ನವಶಕ್ತಿ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಸಮಾವೇಶದಲ್ಲಿ ಜನಶಕ್ತಿ ನೋಡುತ್ತಿದ್ರೆ ಇದೊಂದು ಸಾಧನಾ ಸಮಾವೇಶ ಆಗಿದೆ. 2023 ರ ಚುನಾವಣೆಯಲ್ಲಿ ಎಸ್​ಟಿ ಸಮುದಾಯ ಬಿಜೆಪಿ ಪಕ್ಷಕ್ಕೆ ಶಕ್ತಿ ಆಗಲಿದೆ. ಬೊಮ್ಮಾಯಿಗೆ ಜೋಡಿ ಗುಂಡಿಗೆ ಇದೆ. ನಾಲ್ಕು ದಶಕದ ಹೋರಾಟದ ಬೇಡಿಕೆ ಬೊಮ್ಮಾಯಿ ಈಡೇರಿಸಿದ್ದಾರೆ.

ಬೊಮ್ಮಾಯಿ ಅವರು ದಕ್ಷಿಣದ ವಾಜಪೇಯಿ ಆಗಿದ್ದಾರೆ ಎಂದರು, ಇನ್ನು ಪರೋಕ್ಷವಾಗಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು. ಬೊಮ್ಮಾಯಿ ಈಗ ಸುದರ್ಶನ ಚಕ್ರ ಬಿಟ್ಟಿದ್ದಾರೆ. 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಚಿರಶ್ಚೇದನ ಆಗಲಿದೆ. ಮೀಸಲಾತಿ ನೀಡಲಿಲ್ಲ ಅಂತಾ ನನಗೆ ಗೇಲಿ ಮಾಡಿದ್ರಿ ಇವತ್ತು ಮೀಸಲಾತಿ ನೀಡಿ ಬೊಮ್ಮಾಯಿ ಅವರು ಬಳ್ಳಾರಿಗೆ ಬಂದಿದ್ದಾರೆ. ನಿಮಗೆ ತಾಕತ್ತು ಇದ್ರೆ ಬಳ್ಳಾರಿಗೆ ಬನ್ನಿ ಇಲ್ಲಿಯ ಜನಸಾಗರ ನೋಡಿ. ನಮ್ಮ ತಾಕತ್ತು ಬಗ್ಗೆ ಕೇಳುತ್ತೀರಾ? ನಾವೇನು ಬಳೆ ಹಾಕಿಕೊಂಡಿಲ್ಲ ಎಂದು ವಾಗ್ದಾಳಿ ನಡೆಸಿದರು.

Exit mobile version