Site icon PowerTV

ಶಾಸಕರ ಖರೀದಿ ಕೇಸ್​: ವಿಚಾರಣೆಗೆ ಬರುವಂತೆ ಬಿ.ಎಲ್ ಸಂತೋಷ್’ಗೆ SIT ನೋಟಿಸ್

ನವದೆಹಲಿ: ತೆಲಂಗಾಣ ಟಿಆರ್​​ಎಸ್ ಶಾಸಕರ ಹಣ ನೀಡಿ ಖರೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (ಎಸ್ಐಟಿ) ದಿಂದ ಬಿ.ಎಲ್ ಸಂತೋಷ್ ಗೆ ನೋಟಿಸ್ ನೀಡಲಾಗಿದೆ.

ಬಿ.ಎಲ್​ ಸಂತೋಷ್​ ಅವರಿಗೆ ಹೈದರಾಬಾದ್‌ ನವೆಂಬರ್‌ 21 ರಂದು ಖುದ್ದು ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ಸಮನ್ಸ್ ಜಾರಿಗೊಳಿಸಿದ್ದು, ವಿಚಾರಣೆಗೆ ಹಾಜರಾಗದಿದ್ದರೆ ಬಂಧಿಸುವುದಾಗಿ ಎಚ್ಚರಿಕೆ ಸಹ ನೀಡಿದೆ.

ಸಂತೋಷ್ ಅವರು ಹೇಳಿದ ದಿನಾಂಕ ಮತ್ತು ಸಮಯದಂದು ಎಸ್‌ಐಟಿ ಮುಂದೆ ಹಾಜರಾಗಲು ವಿಫಲವಾದರೆ ಅವರನ್ನು ಬಂಧಿಸಲಾಗುವುದು ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ. ಎಸ್ಐಟಿ ಸೆಕ್ಷನ್ 41(ಎ) ಅಡಿಯಲ್ಲಿ ಬಿಜೆಪಿ ನಾಯಕನಿಗೆ ನೋಟಿಸ್ ನೀಡಲಾಗಿದೆ.

Exit mobile version