Site icon PowerTV

ಇಟಾನಗರದಲ್ಲಿ ಮೊದಲ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣ ಉದ್ಘಾಟಿಸಿದ ಮೋದಿ

ಅರುಣಾಚಲ ಪ್ರದೇಶ: ಪ್ರಧಾನಿ ನರೇಂದ್ರ ಮೋದಿ ಅವರು ಅರುಣಾಚಲ ಪ್ರದೇಶದ ಇಟಾನಗರದಲ್ಲಿ ರಾಜ್ಯದ ಮೊದಲ ಗ್ರೀನ್‌ಫೀಲ್ಡ್ ದೊನ್ಯಿ ಪೊಲೊ ವಿಮಾನ ನಿಲ್ದಾಣವನ್ನು ಉದ್ಘಾಟಿಸಿದರು.

ಈಶಾನ್ಯದಲ್ಲಿ ರಾಜ್ಯಗಳಿಗೆ ಸಂಪರ್ಕ ಕಲ್ಪಿಸಲು ಈ ವಿಮಾನ ನಿಲ್ದಾಣ ಪ್ರಮುಖ ಹೆಜ್ಜೆಯಾಗಿದೆ. ಅರುಣಾಚಲ ಪ್ರದೇಶದ ರಾಜ್ಯದ ರಾಜಧಾನಿ ಇಟಾನಗರದಲ್ಲಿ ವಿಮಾನ ನಿಲ್ದಾಣವನ್ನು ಹೊಂದುವುದು ನಮ್ಮ ಕನಸಾಗಿತ್ತು. ಪ್ರಧಾನಿ ಮೋದಿಯವರ ಪ್ರಯತ್ನದಿಂದ ಆ ಕನಸು ನನಸಾಗಿದೆ. ಅವರು ಈ ವಿಮಾನ ನಿಲ್ದಾಣವನ್ನು ನಿರ್ಮಿಸಲು ವಿಶೇಷ ನಿರ್ದೇಶನಗಳನ್ನು ನೀಡಿದರು ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಅವರು ದೊಂನ್ಯಿ ಪೊಲೊ ವಿಮಾನ ನಿಲ್ದಾಣದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ವಿಮಾನ ನಿಲ್ದಾಣದ ಹೆಸರು ಅರುಣಾಚಲ ಪ್ರದೇಶದ ಸಂಪ್ರದಾಯಗಳು ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುತ್ತದೆ. ಅರುಚಾಚಲ ರಾಜ್ಯದಲ್ಲಿ ಸೂರ್ಯ (‘ದೊಂನ್ಯಿ’) ಮತ್ತು ಚಂದ್ರನ (‘ಪೋಲೋ’) ಪ್ರಾಚೀನ ಸ್ಥಳೀಯ ಗೌರವವನ್ನು ಪ್ರತಿಬಿಂಬಿಸುತ್ತದೆ.

Exit mobile version