Site icon PowerTV

ಅಧ್ಯಕ್ಷ ಬೈಡನ್‌ಗೂ ಶುರುವಾಯ್ತಾ ಟೆನ್ಷನ್‌..?

ಅಮೆರಿಕಕ್ಕೆ ಅಪ್ಪಳಿಸಬಲ್ಲ ಸಾಮರ್ಥ್ಯವಿರುವ ದೀರ್ಘ ಶ್ರೇಣಿಯ ಕ್ಷಿಪಣಿಯನ್ನು ಉತ್ತರ ಕೊರಿಯಾ ಉಡಾಯಿಸಿದೆ.

ಉತ್ತರ ಕೊರೊಯಾವು ತನ್ನ ಪರೀಕ್ಷಾ ಚಟುವಟಿಕೆಗಳನ್ನು ಪುನರಾರಂಭಿಸಿದ ಒಂದು ದಿನದ ನಂತರ, ದಕ್ಷಿಣ ಕೊರಿಯಾ ಮತ್ತು ಜಪಾನ್ ಜೊತೆಗಿನ ಮೈತ್ರಿ ಗಟ್ಟಿಗೊಳಿಸುವ ಅಮೆರಿಕದ ಕ್ರಮಗಳ ವಿರುದ್ಧ ಕ್ಷಿಪಣಿ ಉಡಾವಣೆ ಮೂಲಕ ಪ್ರತಿಭಟನೆಯನ್ನು ವ್ಯಕ್ತಪಡಿಸಿದೆ.

ಉತ್ತರ ಕೊರಿಯಾವು ಪೂರ್ವ ಕರಾವಳಿ ಕಡೆಗೆ ಖಂಡಾಂತರ ಕ್ಷಿಪಣಿ ಉಡಾವಣೆ ಮಾಡಿರುವುದನ್ನು ಪತ್ತೆ ಮಾಡಿರುವುದಾಗಿ ದಕ್ಷಿಣ ಕೊರಿಯಾದ ಜಂಟಿ ಸೇನಾ ಮುಖ್ಯಸ್ಥರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಉತ್ತರ ಕೊರಿಯಾ ತನ್ನ ಪಶ್ಚಿಮ ಕರಾವಳಿ ಪ್ರದೇಶದಿಂದ ಐಸಿಬಿಎಂ-ಶ್ರೇಣಿಯ ಖಂಡಾಂತರ ಕ್ಷಿಪಣಿಯನ್ನು ಹಾರಿಸಿದೆ ಎಂದು ಜಪಾನಿನ ರಕ್ಷಣಾ ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ. ಈ ಕ್ಷಿಪಣಿಯು ಉತ್ತರ ಕೊರಿಯಾ ಪೂರ್ವ ಕರಾವಳಿ ಉದ್ದಕ್ಕೂ ಸಂಚರಿಸಿದೆ.

Exit mobile version